Thursday, April 16, 2026
Homeಟಾಪ್ ನ್ಯೂಸ್BOLLYWOOD: ‌ʼಟಾಯ್ಲೆಟ್‌ʼ ಸಿನಿಮಾ ಟೈಟಲ್ ವ್ಯಂಗ್ಯವಾಡಿದ ಜಯಾ ಬಚ್ಚನ್‌ಗೆ ನಟ ಅಕ್ಷಯ್‌ ಕುಮಾರ್‌ ತಿರುಗೇಟು

BOLLYWOOD: ‌ʼಟಾಯ್ಲೆಟ್‌ʼ ಸಿನಿಮಾ ಟೈಟಲ್ ವ್ಯಂಗ್ಯವಾಡಿದ ಜಯಾ ಬಚ್ಚನ್‌ಗೆ ನಟ ಅಕ್ಷಯ್‌ ಕುಮಾರ್‌ ತಿರುಗೇಟು

ಮುಂಬೈ: ಬಾಲಿವುಡ್‌ನ ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಚಿತ್ರದ ಬಗ್ಗೆ ವ್ಯಂಗ್ಯವಾಡಿದ ಬಿಗ್‌ ಬಿ ಅಮಿತಾಬ್ ಬಚ್ಚನ್‌ ಪತ್ನಿ ಜಯಾ ಬಚ್ಚನ್‌ಗೆ ಸಿನಿಮಾದ ನಾಯಕ ನಟ ಅಕ್ಷಯ್‌ ಕುಮಾರ್‌ ತಿರುಗೇಟು ನೀಡಿದ್ದಾರೆ.

ಇಂದು ತಮ್ಮ ‘ಕೇಸರಿ 2’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಾ ಬಚ್ಚನ್‌ ಹೇಳಿಕೆಗೆ ಗರಂ ಆಗಿಯೇ ಉತ್ತರಿಸಿದ್ದಾರೆ. ಈ ಚಿತ್ರಗಳನ್ನು ಯಾರೂ ಟೀಕಿಸಿಲ್ಲ ಎಂದು ಭಾವಿಸುತ್ತೇನೆ. ಜನರಿಗೆ ಅಂತಹ ಸಂದೇಶವನ್ನು ನೀಡುವ ಈ ಚಿತ್ರಗಳನ್ನು ಟೀಕಿಸಿದರೆ ಅವರು ನಿಜವಾಗಿಯೂ ಮೂರ್ಖರಾಗುತ್ತಾರೆ. ಪ್ಯಾಡ್‌ಮ್ಯಾನ್, ಟಾಯ್ಲೆಟ್, ಏರ್‌ಲಿಫ್ಟ್, ಕೇಸರಿ ಅಥವಾ ಈಗ ಕೇಸರಿ 2 ಆಗಿರಬಹುದು ಎಂದು ಟಾಂಗ್‌ ಕೊಟ್ಟಿದ್ದಾರೆ.

ಜಯಾ ಬಚ್ಚನ್‌ ಹೇಳಿದ್ದೇನು..?; ಚಿತ್ರದ ಶೀರ್ಷಿಕೆಯನ್ನು ನೋಡಿಯೇ, ನಾನು ಇಂತಹ ಹೆಸರಿನ ಸಿನಿಮಾ ನೋಡಲು ಎಂದಿಗೂ ಹೋಗಲ್ಲ. ಇವೆಲ್ಲಾ ಸಿನಿಮಾದ ಹೆಸರೇ? ಪ್ರೇಕ್ಷಕರು ಅಂತಹ ಹೆಸರಿನ ಸಿನಿಮಾ ನೋಡಲು ಒಪ್ಪುತ್ತಾರೆಯೇ?. ಇಷ್ಟು ಜನರಲ್ಲಿ ಕೇವಲ ನಾಲ್ಕು ಜನರು ಮಾತ್ರ ಈ ಸಿನಿಮಾ ನೋಡಲು ಬಯಸುತ್ತಾರೆ. ಇದು ತುಂಬಾ ದುಃಖಕರವಾಗಿದೆ. ಇವೆಲ್ಲಾ ಫ್ಲಾಪ್ ಸಿನಿಮಾ ಅಂತಾ ಅಕ್ಷಯ್‌ ಕುಮಾರ್‌ ಅವರ ಸಾಮಾಜಿಕ ಕಳಕಳಿ ಹೊತ್ತ ಸಿನಿಮಾಗಳನ್ನು ವ್ಯಂಗ್ಯ ಮಾಡಿದ್ದರು. ಇದಕ್ಕೆ ನೆಟ್ಟಿಗರು ಜಯಾ ವಿರುದ್ಧ ಕಿಡಿಕಾರಿದ್ದರು.

ʼಟಾಯ್ಲೆಟ್: ಏಕ್ ಪ್ರೇಮ್ ಕಥಾ‌ ಹೈʼ ಸಿನಿಮಾ 2017 ರಲ್ಲಿ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಭೂಮಿ ಪೆಡ್ನೇಕರ್ ನಟಿಸಿದ್ದಾರೆ. ತನ್ನ ಮನೆಯಲ್ಲಿ ಸರಿಯಾದ ಶುಚಿತ್ವ ಕೋರುವ ಮಹಿಳೆಯ ಹೋರಾಟದ ಮೇಲೆ ಕೇಂದ್ರೀಕರಿಸಿದೆ. ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲೂ ಕಮಾಲ್‌ ಮಾಡಿದ್ದು, ವಿಶ್ವಾದ್ಯಂತ 216 ಕೋಟಿಗೂ ಹೆಚ್ಚು ಹಣ ಗಳಿಸಿತ್ತು.

ಹೆಚ್ಚಿನ ಸುದ್ದಿ

Change Language »
error: Content is protected !!