ನವದೆಹಲಿ: ರಸ್ತೆ ಪಕ್ಕದ ರೆಸ್ಟೋರೆಂಟ್, ಬೋಟ್ ರೆಸ್ಟೋರೆಂಟ್, ಟೆರೆಸ್ ಮೇಲಿನ ರೆಸ್ಟೋರೆಂಟ್, ದಟ್ಟ ಕಾಡಿನಲ್ಲಿ ಪ್ರಕೃತಿ ಮಧ್ಯ ಇರುವ ರೆಸ್ಟೋರೆಂಟ್ ಹೀಗೆ ನೀವು ಅದೆಷ್ಟೋ ರೆಸ್ಟೋರೆಂಟ್‌ಗಳನ್ನು ನೋಡಿರುತ್ತಿರಾ. ಆದರೆ ಏರೋಪ್ಲೇನ್ ರೆಸ್ಟೋರೆಂಟ್ ನೋಡಿದಿರಾ? ಇದೀಗ ಏರೋಪ್ಲೇನ್ ರೆಸ್ಟೋರೆಂಟ್ ಆರಂಭವಾಗಿದೆ.
ಈ ಏರೋಪ್ಲೇನ್ ರೆಸ್ಟೋರೆಂಟ್‌ಗೆ ತೆರಳಿದ್ದ ಯುವಕನೊಬ್ಬ ಏರೋಪ್ಲೇನ್ ರೆಸ್ಟೋರೆಂಟ್‌ನ ವಿಡಿಯೋವನ್ನು ಸಾಮಾಜಿಕ ಮಾದ್ಯಮದಲ್ಲಿ ಹಂಚಿಕೊಂಡಿದ್ದಾನೆ. ದೆಹಲಿ-ಮೀರತ್ ಪ್ರದೇಶದಲ್ಲಿರುವ ಈ ರೆಸ್ಟೋರೆಂಟ್ ತನ್ನ ವಿಶೇಷತೆಯಿಂದ ಎಲ್ಲರ ಗಮನ ಸೆಳೆದಿದೆ. ಏರೋಪ್ಲೇನ್ ಥೀಮಿನ ರೆಸ್ಟೋರೆಂಟ್ ಇದಾಗಿದ್ದು, ಗ್ರಾಹಕರಿಗೆ ವಿಮಾನದಲ್ಲಿಯೇ ಪ್ರಯಾಣಿಸುತ್ತಿರುವಂತೆ ಹೊಸ ಅನುಭವ ನೀಡುತ್ತಿದೆ.
ಈ ಬಗ್ಗೆ ರೆಸ್ಟೋರೆಂಟ್ ಯೋಜನಾ ವ್ಯವಸ್ಥಾಪಕ ಮಾತನಾಡಿದ್ದು, ಬಳಕೆಯಲ್ಲಿಲ್ಲದ ವಿಮಾನವನ್ನುಬಳಸಿಕೊಂಡು ರೆಸ್ಟೋರೆಂಟ್ ನಿರ್ಮಿಸಲಾಗಿದೆ. ನಾನು ಎಂದಿಗೂ ವಿಮಾನದಲ್ಲಿ ಹೋಗಿಲ್ಲ ಆದರೆ ವಿಮಾನವನ್ನು ಹೊಂದಿದ್ದೆನೆ ಎಂದು ಸಂತಸ ವ್ಯಕ್ತಪದಿಸಿದ್ದಾರೆ.