ನವದೆಹಲಿ: ಕಳೆದ ಜೂನ್ 12 ರಂದು ಅಹಮದಾಬಾದ್‌ನಲ್ಲಿ (Ahmedabad) 260 ಜೀವಗಳನ್ನು ಬಲಿ ತೆಗೆದುಕೊಂಡು ಓರ್ವ ಬದುಕುಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ (Air India) ಮಂಗಳವಾರ ಇಂಧನ ಸ್ವಿಚ್ ತನಿಖೆಗೆ ಸಂಬಂಧಿಸಿದಂತೆ ಮಹತ್ವದ ಹೇಳಿಕೆ ನೀಡಿದೆ.
ಈ ಹೇಳಿಕೆಯಲ್ಲಿ, ತನ್ನ ಬೋಯಿಂಗ್ 787 ಮತ್ತು ಬೋಯಿಂಗ್ 737 ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್ (FCS) ನ ಲಾಕಿಂಗ್ ಕಾರ್ಯವಿಧಾನದ ಬಗ್ಗೆ ಎಚ್ಚರಿಕೆಯಿಂದ ತನಿಖೆ ನಡೆಸಲಾಗಿದೆ ಎಂದು ತಿಳಿಸಲಾಗಿದೆ. ಅದರಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ವಿಮಾನ ಸುರಕ್ಷತಾ ನಿಯಂತ್ರಕ DGCA ಕಳೆದ ವಾರ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಿತ್ತು. ಜುಲೈ 21 ರೊಳಗೆ ವಿಮಾನಯಾನ ಸಂಸ್ಥೆಗಳು ತಮ್ಮ ಬೋಯಿಂಗ್ 787 ಮತ್ತು ಬೋಯಿಂಗ್ 737 ವಿಮಾನಗಳಲ್ಲಿನ ಇಂಧನ ಸ್ವಿಚ್ ಲಾಕಿಂಗ್ ವ್ಯವಸ್ಥೆಯನ್ನು ಪರಿಶೀಲಿಸಬೇಕು ಎಂದು ಹೇಳಲಾಗಿತ್ತು.
ಕಳೆದ ತಿಂಗಳು ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತ ಸಂಭವಿಸುವ ಮೊದಲು ಇಂಧನ ಸ್ವಿಚ್‌ಗಳನ್ನು ಆಫ್ ಮಾಡಲಾಗಿದೆ ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತನ್ನ ಪ್ರಾಥಮಿಕ ವರದಿಯಲ್ಲಿ ಹೇಳಿತ್ತು. ವಿಮಾನದಲ್ಲಿನ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ನಲ್ಲಿ ರೆಕಾರ್ಡ್ ಆಗಿದ್ದ ಪೈಲೆಟ್ ಗಳ ವಾಯ್ಸ್ ನೋಟ್ ವೊಂದು ಸಿಕ್ಕಿದ್ದು, ಇದನ್ನು ಪರಿಶೀಲಿಸಿದಾಗ ಸ್ಫೋಟಕ ಮಾಹಿತಿ ಬಯಲಾಗಿದೆ. ವಿಮಾನ ರನ್ ವೇಯಿಂದ ಟೆಕ್ ಆಫ್ ಆಗುತ್ತಿದ್ದಂತೆ ಇಂಧನ ಸ್ವಿಚ್ ಧಿಡೀರ್ ಆಗಿ ಆಫ್ ಆಗಿದೆ. ಇಂಧನದ ಸ್ವಿಚ್ ಆಫ್ ಆಗುತ್ತಿದ್ದಂತೆ ಎರಡು ಇಂಜಿನ್ ಗಳಿಗೆ ಇಂಧನ ಸರಬರಾಜು ಆಗುವುದು ನಿಂತು ಹೋಗಿದೆ. ಪರಿಣಾಮ ಗಾಳಿಯ ಒತ್ತಡ ಕಳೆದುಕೊಂಡು ನಿಯಂತ್ರಣ ತಪ್ಪಿದೆ. ಈ ವೇಳೆ ಪೈಲೆಟ್ ಒಬ್ಬರು ಇಂಧನದ ಸ್ವಿಚ್ ಯಾಕೆ ಆಫ್ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ: ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಏರ್ ಇಂಡಿಯಾ ಅಪಘಾತದ ಪ್ರಾಥಮಿಕ ವರದಿ ಸಲ್ಲಿಕೆ- ವರದಿ
ಇದಕ್ಕೆ ಸಹ ಪೈಲೆಟ್ ಇಲ್ಲ ನಾನು ಏನೂ ಮಾಡಿಲ್ಲ.. ಎಂದು ಹೇಳುವುದು ವಿಮಾನದ್ದ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ನಲ್ಲಿ ದಾಖಲಾಗಿದೆ. ಇದಾಗಿ ಕೆಲವೇ ಸೆಕೆಂಡ್ ಗಳಲ್ಲಿ ವಿಮಾನ ಹಾಸ್ಟೆಲ್ ಗೆ ಹೋಗಿ ಅಪ್ಪಳಿಸಿದ್ದು ಪರಿಣಾಮ ವಿಮಾನದಲ್ಲಿದ್ದ 260 ಜನ ಹಾಗೂ ಹಾಸ್ಟೆಲ್ ನಲ್ಲಿದ್ದ 19 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಇಂಧನದ ಸ್ವಿಚ್ ಆಫ್ ಆಗುವುದಕ್ಕೂ ಮೊದಲು ವಿಮಾನ ಸುಮಾರು 180 ನಾಟ್ ಗರಿಷ್ಠ ವೇಗ ತಲುಪಿತ್ತು. ಇದೇ ವೇಳೆ ಇಂಜಿನ್ ಗಳಿಗೆ ಇಂಧನ ಸರಬರಾಜು ನಿಂತು ಹೋಗಿದ್ದು, ವಿಮಾನದ ವೇಗ ಹಾಗೂ ಎತ್ತರದ ಮೇಲೆ ಪರಿಣಾಮ ಬೀರಿತು ಎನ್ನಲಾಗಿದೆ. ವರದಿಯ ಪ್ರಕಾರ, ಇಂಧನದ ಇಂಜಿನ್ ಆಫ್ ಆಗಿರುವುದು ಗೊತ್ತಾಗುತ್ತಿದ್ದಂತೆ ಪೈಲೆಟ್ ಗಳು ಮತ್ತೆ ಸ್ವಿಚ್ ಆನ್ ಮಾಡಿದ್ದಾರೆ. ಆದರೆ ಇಂಜಿನ್ 2 ರನ್ ಆದರೆ, ಇಂಜಿನ್ 1 ಆನ್ ಆಗದೆ ಉಳಿಯಿತು ಎಂದು ತಿಳಿದುಬಂದಿತ್ತು.
ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ, ವಿಮಾನ ಸಂಖ್ಯೆ Al 171, ಟೇಕ್ ಆಫ್ ಆದ ಕೆಲ ಸಮಯದ ನಂತರ ಅಪಘಾತಕ್ಕೀಡಾಯಿತು. ಈ ವಿಮಾನದಲ್ಲಿ 242 ಪ್ರಯಾಣಿಕರಿದ್ದು, ಅದರಲ್ಲಿ 241 ಜನರು ಸಾವನ್ನಪ್ಪಿದ್ದರು. ಇನ್ನು ಹಾಸ್ಟೆಲ್ ಮತ್ತು ಸಮೀಪದಲ್ಲಿದ್ದ 19 ಜನ ಸಾವಿಗೀಡಾಗಿದ್ದರು. ಅಪಘಾತದ ಕಾರಣ ಇನ್ನೂ ತನಿಖೆಯಲ್ಲಿದೆ, ಆದರೆ ವಾಯುಯಾನ ವಲಯದಲ್ಲಿನ ಸುರಕ್ಷತಾ ಪ್ರೋಟೋಕಾಲ್‌ಗಳು ಅಂದಿನಿಂದ ಕಟ್ಟುನಿಟ್ಟಿನ ಪರಿಶೀಲನೆಯಲ್ಲಿವೆ.