Wednesday, December 4, 2024
Homeಟಾಪ್ ನ್ಯೂಸ್CONGRESS : ಸಿದ್ದರಾಮಯ್ಯ ನಂತರ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ- ಶಾಸಕ ಬಾಲಕೃಷ್ಣ          

CONGRESS : ಸಿದ್ದರಾಮಯ್ಯ ನಂತರ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ- ಶಾಸಕ ಬಾಲಕೃಷ್ಣ          

ರಾಮನಗರ : ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಎಲ್ಲಾ ಸಮುದಾಯದ ನಾಯಕರಿಗೂ ಸಿಎಂ ಆಗುವ ಅವಕಾಶವಿದ್ದು, ಸಿದ್ದರಾಮಯ್ಯ ಅವರ ನಂತರ ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಸ್ಥಾನಕ್ಕೆ ಬರಲಿದ್ದಾರೆ ಎಂದು ಮಾಗಡಿಯ ಶಾಸಕ ಹೆಚ್.ಸಿ.ಬಾಲಕೃಷ್ಣ ಅಭಿಪ್ರಾಯಪಟ್ಟರು.

ಸಿಎಂ ಬದಲಾವಣೆಯ ಚರ್ಚೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತಾಗಿ ಬಿಡದಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸದ್ಯ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾರೆ. ಅವರ ನಂತರದಲ್ಲಿ ಡಿಕೆಶಿ ಅವರು ಸಿಎಂ ಆದ್ರೆ, ತದನಂತರದ ಸರದಿಯಲ್ಲಿ ಸಚಿವ ಸತೀಶ್​ ಜಾರಕಿಹೊಳಿ ಅವರಿಗೂ ಸಿಎಂ ಆಗಲು ಅವಕಾಶವಿದೆ ಎಂದರು.

ಕೆಪಿಸಿಸಿ ಅಧ್ಯಕ್ಷ, ಸಿಎಂ ಆಗುವ ಆಸೆ ನನಗೂ ಇದೆ ಎಂಬ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಬೆನ್ನಲ್ಲೇ, ಬಾಲಕೃಷ್ಣ ಅವರು ಈ ಮಾತನ್ನು ಒತ್ತಿ ಹೇಳಿದರು. ಡಿಕೆಶಿ ಅವರ ಕೋಟಾ ನಂತರ, ಸತೀಶ್… ನಂತರ ಎಂ.ಬಿ.ಪಾಟೀಲ್ ಅವರು ಸಿಎಂ ಆಗುವ ಸಾಲಿನಲ್ಲಿ ನಿಂತಿದ್ದಾರೆ. ಇವರೆಲ್ಲರ ನಂತರ ಇನ್ನೋರ್ವ ನಾಯಕರಿಗೂ ಮುಖ್ಯಮಂತ್ರಿ ಸ್ಥಾನ ಸಿಗಲಿದೆ ಎಂದು ಹೇಳಿದರು. ಸಿದ್ದರಾಮಯ್ಯ ಅವರ ನಂತರ ಡಿಕೆಶಿ ಅವರಿಗೆ ಸದ್ಯಕ್ಕೆ ಅವಕಾಶವಿದೆ ಎಂದು ಪುನರುಚ್ಚರಿಸಿದ ಅವರು, ಎಲ್ಲವೂ ಹೈಕಮಾಂಡ್​ ನಿರ್ಧಾರ ಮಾಡಲಿದೆ ಎಂದು ವಿವರಿಸಿದರು.

ಹೆಚ್ಚಿನ ಸುದ್ದಿ

error: Content is protected !!