ಹುಬ್ಬಳ್ಳಿ : ರಾಜ್ಯದಲ್ಲಿ ನಿರಂತರವಾಗಿ ಸರಣಿ ದರೋಡೆ ಪ್ರಕರಣಗಳು ನಡೆಯುತ್ತಿದ್ದು, ಕಾನೂನು ಸೂವ್ಯವಸ್ಥೆ ಮೇಲೆ ಜನಸಾಮಾನ್ಯರಿಗೆ ವಿಶ್ವಾಸ ಕಡಿಮೆಯಾಗುವಂತಹ ಬೆಳವಣಿಗೆಗಳು ಮರುಕಳಿಸುತ್ತಲೇ ಇವೆ.
ಹುಬ್ಬಳ್ಳಿಯ ಎಪಿಎಂಸಿಯಲ್ಲಿರುವ ಕೆನರಾ ಬ್ಯಾಂಕ್ ದರೋಡೆಗೆ ವಿಫಲ ಯತ್ನ ನಡೆದಿರುವುದು ಬೆಳಕಿಗೆ ಬಂದಿದೆ. ಬ್ಯಾಂಕ್ನ ಮುಖ್ಯ ದ್ವಾರದ ಬಾಗಿಲು ಮುರಿದ ಖದೀಮರು, ಗ್ಯಾಸ್ ಕಟರ್ನಿಂದ ಬೀಗ ಕಟ್ ಮಾಡಿ ಲೂಟಿಗೆ ಯತ್ನಿಸಿದ್ದಾರೆ.
ಕಳೆದ ನಾಲ್ಕೈದು ದಿನಗಳ ಹಿಂದೆ ಬೀದರ್ನಲ್ಲಿ ಎಟಿಎಂಗೆ ಹಣ ತುಂಬುವಾಗಲೇ ಇಬ್ಬರು ದರೋಡೆಕೋರರು ಹಾಡಹಗಲೇ ಬೈಕ್ ಮೇಲೆ ಬಂದು ಸಿಬ್ಬಂದಿಗೆ ಗುಂಡು ಹಾರಿಸಿ ಕೊಂದು, 83 ಲಕ್ಷ ರೂಪಾಯಿಯೊಂದಿಗೆ ಎಸ್ಕೇಪ್ ಆಗಿದ್ದರು. ದುಷ್ಕರ್ಮಿಗಳು ಇನ್ನೂ ಸಿಕ್ಕಿಲ್ಲ.
ಮಾರನೇ ದಿನ ಮಂಗಳೂರಿನ ಕೋಟೆಕರ್ ಬ್ಯಾಂಕ್ಗೆ ನುಗ್ಗಿದ್ದ ಐವರ ಡಕಾಯಿತರ ತಂಡ, ಬ್ಯಾಂಕ್ ಸಿಬ್ಬಂದಿಗೆ ಬಂದೂಕು, ತಲ್ವಾರ್ ತೋರಿಸಿ ಬರೋಬ್ಬರಿ ರೂ.12 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ, ಹಣ ದೋಚಿ ಕಾರಿನಲ್ಲಿ ಪರಾರಿಯಾಗಿದ್ದರು.
ಇಂದು ಸಹ ಹಾಡಹಗಲೇ ಕೇರಳದ ಉದ್ಯಮಿಯೋರ್ವನ ಕಾರು ತಡೆದು ಮೈಸೂರಿನಲ್ಲಿ ಮುಸುಕುಧಾರಿಗಳು ದರೋಡೆ ಮಾಡಿದ್ದಲ್ಲೇ, ಉದ್ಯಮಿಯ ಕಾರನ್ನೋ ತೆಗೆದುಕೊಂಡು ಹೋಗಿರುವ ವರದಿಯಾಗಿದೆ.