ಬೆಂಗಳೂರು: ಸನ್ನಡತೆ ಆಧಾರದ ಮೇಲೆ 30 ಕೈದಿಗಳ (Prisoners) ಬಿಡುಗಡೆ (Release) ವಿಚಾರವಾಗಿ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ (Alok kumat ಹೇಳಿಕೆ ನೀಡಿದ್ದು, ಇಡೀ ರಾಜ್ಯದಲ್ಲಿ 30 ಜನ ಬೇರೆ ಬೇರೆ ಕಾರಾಗೃಹದಿಂದ ಬಿಡುಗಡೆ ಆಗಿದ್ದಾರೆ.ಹೆಚ್ಚಾಗಿ ಕೊಲೆ ಕೇಸ್ ನಲ್ಲಿ ಭಾಗಿಯಾಗಿದ್ದವರು ರಿಲೀಸ್ ಆಗಿದ್ದಾರೆ.ಒಳ್ಳೆ ನಡೆತೆಯಿಂದ ಅವರು ರಿಲೀಸ್ ಆಗಿದ್ದಾರೆ.ಸರ್ಕಾರದ ಗೈಡ್ ಲೈನ್ ಪ್ರಕಾರ ರಿಲೀಸ್ ಎಂದಿದ್ದಾರೆ.
ಕಾರಾಗೃಹದಲ್ಲಿ ಸಿಬ್ಬಂದಿಗೆ ಸಹಕಾರ ನೀಡಿದವರು, ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗದವರು ಬಿಡುಗಡೆ ಆಗಿದ್ದಾರೆ. ಕುಟುಂಬದವರನ್ನ, ಊರಿನ ಮುಖಂಡರ ಕರೆದು ಮಾತಾಡಿದ್ದೇವೆ.ಇಂಡಿಯನ್ ಜಸ್ಟಿಸ್ ಪ್ರೋಗ್ರಾಂ ಜತೆ ಸೇರಿ ಯೋಜನೆ ಮಾಡಲಾಗಿದೆ. ಅವರಿಗೆ ಸಮಸ್ಯೆಯಾದರೆ ಸಹಾಯ ಮಾಡುತ್ತೇವೆ ಮತ್ತೆ ಕ್ರೈಂನಲ್ಲಿ ಭಾಗಿಯಾಗಬಾರದು ಅಂತ ಹೇಳಿದ್ದೇವೆ ಎಂದಿದ್ದಾರೆ.
ಒಂದು ವರ್ಷ ಅವರ ಮೇಲೆ ನಿಗಾ ಇಡುತ್ತೇವೆ.
ಇವರಲ್ಲಿ ಮೂರ್ನಾಲ್ಕು ಜನರ ವಯಸ್ಸು ಚಿಕ್ಕದಿದೆ.
ಇಂತವರ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತೆ.
ಮುಂದಿನ ಬದುಕು ಸಮಾಜಕ್ಕೆ ಉಪಯೋಗವಾಗುವಂತೆ ಬದುಕಬೇಕು ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.