Thursday, March 27, 2025
Homeಟಾಪ್ ನ್ಯೂಸ್ಬಹುಭಾಷಾ ನಟಿ ಖುಷ್ಬೂ ಸುಂದರ್ ಆಸ್ಪತ್ರೆಗೆ ದಾಖಲು

ಬಹುಭಾಷಾ ನಟಿ ಖುಷ್ಬೂ ಸುಂದರ್ ಆಸ್ಪತ್ರೆಗೆ ದಾಖಲು

ಹೈದರಾಬಾದ್: ಬಹುಭಾಷಾ ನಟಿ, ರಾಜಕಾರಣಿ ಖುಷ್ಬೂ ಸುಂದರ್ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಸ್ವತಃ ಖುಷ್ಬೂ ಸುಂದರ್ ಅವರೇ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.

ಖುಷ್ಬು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋಗಳ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.. ತೀವ್ರ ನೋವು ಹಾಗೂ ದೌರ್ಬಲ್ಯದಿಂದ ಬಳಲುತ್ತಿರುವುದಾಗಿ ಖುಷ್ಬೂ ಸುಂದರ್ ತಿಳಿಸಿದ್ದಾರೆ.

ನನಗೆ ಬಾಧಿಸುತ್ತಿರುವ ಜ್ವರ ಮಾರಕವಾಗಿದ್ದು, ನನ್ನ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ತೀವ್ರ ಜ್ವರ, ಕೊಲ್ಲುವಂತಹ ದೇಹ ನೋವು ಮತ್ತು ದೌರ್ಬಲ್ಯದಿಂದ ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ. ನಿಮ್ಮ ದೇಹ ನಿಮಗೆ ನಿಧಾನವಾಗಿ ಹೋಗು ಎಂದು ಸೂಚನೆ ಕೊಟ್ಟಾಗ ದಯವಿಟ್ಟು ನಿರ್ಲಕ್ಷಿಸದಿರಿ. ನಾನೀಗ ಚೇತರಿಕೆಯ ಹಾದಿಯಲ್ಲಿ ಇದ್ದೇನೆ. ಇನ್ನೂ ಬಹಳ ದೂರ ಹೋಗಬೇಕಿದೆ ಎಂದು ನಟಿ ಖುಷ್ಬೂ ಸುಂದರ್ ಟ್ವೀಟ್ ಮಾಡಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!