ಬೆಂಗಳೂರು: ನಟಿ ಭಾವನ ರಾಮಣ್ಣ ಸದ್ಯ ಗರ್ಭವತಿಯಾಗಿದ್ದಾರೆ. ಹೌದು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಉತ್ತಮ ಚಿತ್ರಗಳ ಮೂಲಕ ಗುರುತಿಸಿಕೊಂಡ ನಟಿ ಭಾವನ ಅವರಿಗೆ ಈಗ 40 ವರ್ಷ ಮತ್ತು ನಟಿ ಭವನ ಅವರುಗೆ ಇನ್ನೂ ವಿವಾಹವಾಗಿಲ್ಲ.
ಆದ್ರೆ ವೈದ್ಯಕೀಯ ವಿಜ್ಞಾನದ ಸಹಾಯದ ಮುಖೇನ ನಟಿ ಭವನ ರಾಮಣ್ಣ ತಾಯಿಯಾಗುವ ಕನಸನ್ನು ಸಾಕಾರಗೊಳಿಸಿಕೊಳ್ಳಲು ಮುಂದಾಗಿದ್ದಾರೆ.ಹೀಗಾಗಿ ಐ.ವಿ.ಎಫ್ ವಿಧಾನದ ಮೂಲಕ ವೀರ್ಯ ದಾನ ಪಡೆದು ಭವನ ಗರ್ಭಧಾರಣೆ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ವೀರ್ಯ ದಾನ ಪಡೆತುವ ವೇಳೆ ತಾವು ವೈದ್ಯರ ಬಳಿ ಏನೆಲ್ಲ ಚರ್ಚಿಸಿದ್ದೆ ಎಂಬುದರ ಕುರಿತು ಮಾತನಾಡಿದ್ದಾರೆ. ತಮಗೆ ದಕ್ಷಿಣ ಭಾರತ ಮೂಲದ ದಾನಿಯ ವೀರ್ಯಾಣು ಪಡೆಯಲು ಆಸಕ್ತಿ ಇರುವುದಾಗಿ ಹೇಳಿಕೊಂಡಿದ್ದರಂತೆ.
ಹೌದು ಆಹಾರ ಪದ್ದತಿ, ಜೀನ್ಸ್ ಮತ್ತು ಜೀವನ ಪದ್ಧತಿಗೆ ಸರಿ ಹೊಂದುವ ಸಲುವಾಗಿ ನನಗೆ ದಕ್ಷಿಣ ಭಾರತದ ವ್ಯಕ್ತಿಯ ವೀರ್ಯಾಣು ಸಿಕ್ಕರೆ ಉತ್ತಮವಾಗಿರಲಿದೆ ಎಂದು ಹೇಳಿಕಿಂಡಿದ್ದೆ ಎಂಬ ಸಂಗಂತಿಯನ್ನು ಹಂಚಿಕೊಂಡಿದ್ದಾರೆ.
ಇನ್ನು ನಮಗೆ ತಿಳಿದಿರುವ ವ್ಯಕ್ತಿಯಿಂದ ವೀರ್ಯ ದಾನ ಪಡೆದರೆ , ಮುಂದಿನ ದಿನಗಳಲ್ಲಿ ಸಹಜವಾಗಿಯೇ ಇಬ್ಬರ ನಡುವೆಯೂ ಬಾಂಧವ್ಯ ಬೆಳೆಯುವ ಸಾಧ್ಯತೆ ಇರುತ್ತದೆ.ಹೀಗಾಗಿ ನಾನು ಅನಾಮಿಕರಿಂದ ವೀರ್ಯ ಪಡೆದುವುದಾಗಿ ಹೇಳಿಕೊಂಡಿದ್ದಾರೆ.