ಬೆಂಗಳೂರು: ನಟಿ ಭಾನುಪ್ರಿಯಾ (Actress Bhanupriya) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅವರ ಅಭಿನಯದ ಸಿನಿಮಾಗಳು (Films) ಇಂದಿಗೂ ಅನೇಕರಿಗೆ ಬಹಳ ಇಷ್ಟ. ನಟಿ ಭಾನುಪ್ರಿಯಾ ಎಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಮಲೆನಾಡು ಅಡಿಕೆ, ಮೈಸೂರು ವೀಳ್ಯದೆಲೆ ಹಾಡು. ಈ ನಟಿಯ ವೈಯಕ್ತಿಕ ಜೀವನದ ಬಗ್ಗೆ ಅನೇಕ ಜನರಿಗೆ ಗೊತ್ತಿಲ್ಲ. ಆದರೆ ಸದ್ಯ ವೈರಲ್ ಆಗುತ್ತಿರುವ ಸುದ್ದಿಯ ಪ್ರಕಾರ ನಿರ್ದೇಶಕರೊಬ್ಬರು ಅವರನ್ನ ಮದುವೆಯಾಗಲು ಬಯಸಿದ್ದರಂತೆ. ಏನಿದು ಹೊಸ ಸುದ್ದಿ? ಇಲ್ಲಿದೆ ನೋಡಿ.
ತೆಲುಗು ನಿರ್ದೇಶಕರೊಬ್ಬರಿಗೆ ನಟಿ ಮೇಲೆ ಮನಸ್ಸಾಗಿತ್ತಂತೆ
ಒಂದು ಕಾಲದಲ್ಲಿ ಘಟಾನುಘಟಿ ನಾಯಕರ ಜೊತೆ ತೆರೆ ಹಂಚಿಕೊಂಡಿದ್ದ ಭಾನುಪ್ರಿಯ ತಮ್ಮ ಅಮೋಘ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಕನ್ನಡ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ಸಾಂಪ್ರದಾಯಿಕ ಲುಕ್‌ಗಳಲ್ಲಿ ಅವರು ಕಾಣಿಸಿದ್ದಾರೆ. ಅವರನ್ನ ಇಂದಿಗೂ ಜನ ನೆನಪಿಸಿಕೊಳ್ಳುತ್ತಾರೆ. ಈ ನಟಿಯನ್ನ ಮದುವೆ ಆಗಬೇಕು ಎಂಬ ಆಸೆ ತೆಲುಗು ನಿರ್ದೇಶಕರಿಗೆ ಇತ್ತಂತೆ. ಅವರಿಗೆ ಭಾನುಪ್ರಿಯ ಮೇಲೆ ಮನಸ್ಸಾಗಿತ್ತು ಎನ್ನುವ ವಿಚಾರವನ್ನ ನಟಿಯೇ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ACTRESS PREMA: ಕೊಡವ ಸಮುದಾಯದಿಂದ ನನಗಿಂತಲೂ ಮೊದಲು ಚಿತ್ರರಂಗಕ್ಕೆ ಬಂದಿದ್ದಾರೆ- ನಟಿ ಪ್ರೇಮ
ಭಾನುಪ್ರಿಯ ತಮಿಳು ಸಿನಿಮಾಗಳಲ್ಲಿ ಬಹಳ ಹೆಸರನ್ನ ಗಳಿಸಿದ್ದರು. ಅವರನ್ನ ತೆಲುಗು ಸಿನಿಮಾಗೆ ಕರೆತಂದಿದ್ದು, ನಿರ್ದೇಶಕ ವಂಶಿ ಅವರು. ಅನೇಕ ಜನರು ಅವರನ್ನ ರಿಜೆಕ್ಟ್ ಮಾಡಿದ್ದರೂ ಸಹ ವಂಶಿ ಅವರ ನಂಬಿಕೆ ಇಟ್ಟು ಸಿತಾರ ಸಿನಿಮಾದಲ್ಲಿ ನಾಯಕಿಯಾಗಿ ಅವರನ್ನ ತೆಲುಗು ಸಿನಿಮಾ ರಂಗಕ್ಕೆ ಪರಿಚಯ ಮಾಡಿದ್ದರು. ಅಲ್ಲದೇ, ಭಾನುಪ್ರಿಯ ಸ್ಟಾರ್ ನಟಿಯಾಗಲು ಅವರು ಬಹು ದೊಡ್ಡ ಕಾರಣವಾಗಿದ್ದು. ಅವರ ಬೆನ್ನ ಹಿಂದೆ ನಿಂತು ಅವರನ್ನ ಬೆಳೆಸಿದ್ದರು. ನಂತರ ಅವರು ಕನ್ನಡ, ತೆಲಗು, ತಮಿಳು ಸಿನಿಮಾ ರಂಗದಲ್ಲಿ ನೂರಾಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: ನಮ್ಮ ಚಿತ್ರರಂಗದಲ್ಲಿ ಸ್ವಲ್ಪ ಒಗ್ಗಟ್ಟು ಕಡಿಮೆ, ಶಾಕಿಂಗ್ ಹೇಳಿಕೆ ಕೊಟ್ಟ ರಮ್ಯಾ
ಭಾನುಪ್ರಿಯ ತಾಯಿಯಿಂದ ವಿರೋಧ
ಭಾನುಪ್ರಿಯ ಸಹ ನಿರ್ದೇಶಕ ವಂಶಿ ಉತ್ತಮವಾದ ಬಾಂಧವ್ಯವನ್ನ ಹೊಂದಿದ್ದರು. ಹಾಗಾಗಿ ವಂಶಿ ಅವರು ಭಾನುಪ್ರಿಯ ಅವರನ್ನ ಮದುವೆಯಾಗಲು ಬಯಸಿದ್ದರು. ಆದರೆ ವಂಶಿ ಅವರಿಗೆ ಆ ಸಮಯದಲ್ಲಿ ಮದುವೆಯಾಗಿ, ಮಕ್ಕಳು ಸಹ ಇದ್ದರು. ಆದರೆ ಭಾನುಪ್ರಿಯ ವಂಶಿ ಅವರ ಜೊತೆ ಎರಡನೇ ಮದುವೆಗೆ ಸಹ ಸಿದ್ದರಾಗಿದ್ದರು. ಹಾಗಾಗಿ ಈ ವಿಚಾರವನ್ನ ಹಿರಿಯರ ಬಳಿ ನಟಿ ಮಾತನಾಡಿದ್ದರಂತೆ. ಆದರೆ ಇದಕ್ಕೆ ಅವರ ಪೋಷಕರು ಮಾತ್ರ ಒಪ್ಪಿಗೆ ನೀಡಿಲ್ಲ. ವಿಶೇಷವಾಗಿ ಭಾನುಪ್ರಿಯಾ ಅವರ ತಾಯಿ ಮದುವೆಯಾಗಲು ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರಂತೆ. ಏಕೆಂದರೆ ವಂಶಿಗೆ ಈಗಾಗಲೇ ಮದುವೆಯಾಗಿದೆ. ಅವರಿಗೆ ಮಕ್ಕಳು ಸಹ ಇದ್ದಾರೆ. ಅಂತಹ ವ್ಯಕ್ತಿಯನ್ನು ಏಕೆ ಮದುವೆಯಾಗಬೇಕು? ಎಂದು ಭಾನುಪ್ರಿಯಳ ತಾಯಿ ಅವರನ್ನು ಗದರಿಸಿದ್ದರಂತೆ. ಕಾರಣದಿಂದ ಇಬ್ಬರೂ ಈ ಮದುವೆಯಿಂದ ಹಿಂದೆ ಸರಿದಿದ್ದರಂತೆ.