Saturday, November 2, 2024
Homeಟಾಪ್ ನ್ಯೂಸ್ಮಾತಿಗೆ ತಪ್ಪದ ಪ್ರಕಾಶ್ ರಾಜ್,ಯಶ್ – ಅಪ್ಪು ಆಂಬ್ಯುಲೆನ್ಸ್ ಕೊಡುಗೆ

ಮಾತಿಗೆ ತಪ್ಪದ ಪ್ರಕಾಶ್ ರಾಜ್,ಯಶ್ – ಅಪ್ಪು ಆಂಬ್ಯುಲೆನ್ಸ್ ಕೊಡುಗೆ

ಬೆಂಗಳೂರು: ಪುನೀತ್‌ ರಾಜ್‌ಕುಮಾರ್ ಉತ್ತಮ ನಟನಷ್ಟೇ ಅಲ್ಲ ಸಮಾಜ ಸೇವೆಯನ್ನು ಸದ್ದಿಲ್ಲದೇ ಮಾಡುತ್ತಿದ್ದ ಅಪರೂಪದ ವ್ಯಕ್ತಿ. ಇಂದು ನಮ್ಮೆಲ್ಲರ ನಲ್ಮೆಯ ಅಪ್ಪು ನಮ್ಮೊಂದಿಗಿಲ್ಲ. ಆದರೆ ಅವರ ಹೆಸರಿನಲ್ಲಿ ಜನಸೇವೆ ಮುಂದುವರೆದಿದೆ.

ಈ ಹಿಂದೆ `ಪುನೀತ ಪರ್ವ’ ಕಾರ್ಯಕ್ರಮದಲ್ಲಿ ಪ್ರಕಾಶ್ ರಾಜ್ ಅಪ್ಪು ಹೆಸರಲ್ಲಿ ಆಂಬ್ಯುಲೆನ್ಸ್ ನೀಡೋದಾಗಿ ಹೇಳಿದ್ರು. ಅವರ ಕಾರ್ಯದಲ್ಲಿ ನಟ ಯಶ್ ಕೈ ಜೋಡಿಸೋ ಭರವಸೆ ನೀಡಿದ್ರು. ಕರ್ನಾಟಕದ ಪ್ರತಿ ಜಿಲ್ಲೆಗೂ ಒಂದೊಂದು ಅಂಬುಲೆನ್ಸ್ ತಲುಪಿಸೋ ಕಾರ್ಯವನ್ನು ಮಾಡೋದಾಗಿ ಮಾತು ಕೊಟ್ಟಿದ್ರು. ಇದೀಗ ಈ ಇಬ್ಬರೂ ನಾಯಕರು ಕೊಟ್ಟ ಮಾತಿಗೆ ತಪ್ಪದೇ ಜನಸೇವೆಗೆ ಮುಂದಾಗಿದ್ದಾರೆ ಮೊದಲಿಗೆ ಮೈಸೂರಲ್ಲಿ ಈ ಅಪ್ಪು ಎಕ್ಸ್‌ಪ್ರೆಸ್‌ ಸೇವೆ ಆರಂಭಿಸಿದ ನಂತರ ಈಗ ಯೋಜನೆಯ ಎರಡನೇ ಹಂತವಾಗಿ ಬೀದರ್, ಕಲಬುರ್ಗಿ, ಕೊಳ್ಳೆಗಾಲ, ಕೊಪ್ಪಳ, ಉಡುಪಿಗಳಿಗೆ ಆಂಬುಲೆನ್ಸ್ ವಿತರಿಸಲಾಗುತ್ತಿದೆ. ರಾಜ್ಯದ 5 ಜಿಲ್ಲೆಗಳಿಗೆ ಅಪ್ಪು ಅಂಬುಲೆನ್ಸ್ ಅನ್ನು ಪ್ರಕಾಶ್ ರೈ ಅವರು ಉಚಿತವಾಗಿ ನೀಡಿದ್ದಾರೆ. ಈ ಬಗ್ಗೆ ವಿಡಿಯೋವನ್ನು ಸಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಹಾಯ ಮಾಡಿದ ನಟ ಯಶ್, ಸೂರ್ಯ ಹಾಗೂ ಮೆಗಾಸ್ಟಾರ್ ಚಿರಂಜೀವಿ ಅವರುಗಳಿಗೆ ಧನ್ಯವಾದವನ್ನು ಹೇಳಿದ್ದಾರೆ

ಹೆಚ್ಚಿನ ಸುದ್ದಿ

error: Content is protected !!