ಬೆಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ನಟ ರವಿಚಂದ್ರನ್ (Actor Ravichandran) ಅವರು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM DK Shivakumar) ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ರವಿಚಂದ್ರನ್ ಡಿಕೆಶಿ ಅವರಿಗೆ ಹೂಗುಚ್ಛ ನೀಡಿ ಶುಭಾಶಯ ಕೋರಿದರು. ಈ ಭೇಟಿಯ ಬಗ್ಗೆ ಸಿಎಂ ಅವರು, ಕಾಲ ಉರುಳಿದರೂ ಕಳೆಗುಂದದ ಸ್ನೇಹ ನಮ್ಮದು… ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಇಬ್ಬರ ಭೇಟಿಯ ಫೋಟೋ ವೈರಲ್ ಆಗಿದೆ.
ಕಾಲ ಉರುಳಿದರೂ ಕಳೆಗುಂದದ ಸ್ನೇಹ ನಮ್ಮದು… pic.twitter.com/HsLJogOpow
— DK Shivakumar (@DKShivakumar) August 5, 2026
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ , ರವಿಚಂದ್ರನ್ ಬಾಲ್ಯದಲ್ಲಿ ಬೆಂಗಳೂರಿನಲ್ಲಿ ಒಟ್ಟಿಗೆ ಓದಿದ ಸಹಪಾಠಿಗಳು. ರಾಜಕೀಯ ಮತ್ತು ಸಿನಿಮಾ ರಂಗದಲ್ಲಿ ಎತ್ತರಕ್ಕೆ ಬೆಳೆದಿದ್ದರೂ, ತಮ್ಮ ಬಾಲ್ಯದ ಈ ಸ್ನೇಹವನ್ನು ಇಂದಿಗೂ ಅದೇ ಪ್ರೀತಿಯಿಂದ ಮುಂದುವರಿಸಿಕೊಂಡು ಬಂದಿದ್ದಾರೆ.
ರವಿಚಂದ್ರನ್ ರಾಜಕೀಯದಲ್ಲಿ ಆ್ಯಕ್ಟಿವ್ ಆಗಿಲ್ಲ. ಹೀಗಾಗಿ, ಈ ಭೇಟಿ ಸಿನಿಮಾಗೆ ಸಂಬಂಧಿಸಿದ ವಿಷಯಕ್ಕೆ ನಡೆದಿರಬಹುದು ಎನ್ನಲಾಗುತ್ತಿದೆ. ಇವರ ಭೇಟಿ ನಡೆದಿದ್ದು ಏಕೆ ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.
ಇದನ್ನೂ ಓದಿ: RAM MANDIR: ಅಯೋಧ್ಯೆ ರಾಮಮಂದಿರ ಕಾಣಿಕೆ ಲೂಟಿ ಕೇಸ್ : ಸಂತರ ಮೇಲಿನ ಆರೋಪ ತಳ್ಳಿಹಾಕಿದ ಸಿಎಂ ಯೋಗಿ!