Monday, April 13, 2026
Homeಟಾಪ್ ನ್ಯೂಸ್DARSHAN: ತುಳಸಿ ಗಿಡಕ್ಕೆ ನೀರು ಹಾಕಿದ ದರ್ಶನ್‌, ಹೊಸ ಅವತಾರದಲ್ಲಿ ಚಾಲೆಂಜಿಂಗ್‌ ಸ್ಟಾರ್

DARSHAN: ತುಳಸಿ ಗಿಡಕ್ಕೆ ನೀರು ಹಾಕಿದ ದರ್ಶನ್‌, ಹೊಸ ಅವತಾರದಲ್ಲಿ ಚಾಲೆಂಜಿಂಗ್‌ ಸ್ಟಾರ್

ಬೆಂಗಳೂರು: ನಟ ದರ್ಶನ (Actor Darshan) ಇತ್ತೀಚಿನ ದಿನಗಳಲ್ಲಿ ದೇವಸ್ಥಾನ (Temple), ದೇವರಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಹೀಗೆ ಧಾರ್ಮಿಕ ಜಾಗಳಲ್ಲಿ ಮಾತ್ರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೆ ದೇವರ ಮೇಲಿನ ಭಕ್ತಿ ಹೆಚ್ಚಾಗಿದೆ ಎನ್ನುವ ಮಾತು ಸಹ ಕೇಳಿ ಬರುತ್ತಿದೆ. ಇದೀಗ ಅವರು ತುಳಸಿಗೆ (Tulsi) ನಮಸ್ಕಾರ ಮಾಡಿರುವ ಫೋಟೋ ವೈರಲ್‌ (Photo Viral) ಆಗುತ್ತಿದ್ದು, ಅಭಿಮಾನಿಗಳಲ್ಲಿ ಅದು ಅಚ್ಚರಿ ಮೂಡಿಸಿದೆ.

ತುಳಸಿ ಗಿಡಕ್ಕೆ ನೀರು ಹಾಕಿದ ದರ್ಶನ
ನಟ ದರ್ಶನ್‌ ಅವರ ವಿಭಿನ್ನವಾದ ಫೋಟೋ ಸದ್ಯ ಎಲ್ಲೆಡೆ ವೈರಲ್‌ ಆಗುತ್ತಿದ್ದು, ದರ್ಶನ್ ಇಂದು ಮನೆಯ ಮುಂದಿರುವ ತುಳಸಿ ಗಿಡಕ್ಕೆ ನೀರು ಹಾಕಿ ನಮಸ್ಕಾರ ಮಾಡಿದ್ದಾರೆ. ಮಹಿಳೆಯರೇ ಹೆಚ್ಚಾಗಿ ಪೂಜೆ ಮಾಡುವ ತುಳಸಿಗೆ ದರ್ಶನ್‌ ನೀರು ಹಾಕಿ ಕೈ ಮುಗಿದಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ. ತಮ್ಮ ಆರ್‌ಆರ್‌ ನಗರ ಮನೆಯ ಮುಂದಿರುವ ತುಳಸಿ ಗಿಡಕ್ಕೆ ಕೋರ್ಟ್‌ಗೆ ಹೋಗುವ ಮೊದಲು ದರ್ಶನ್‌ ನೀರು ಹಾಕಿದ್ದಾರೆ. ಇನ್ನು ಕೋರ್ಟ್‌ ಹೋಗುವ ಮೊದಲು ದರ್ಶನ್‌ ಅಭಿಮಾನಿಗಳನ್ನ ಸಹ ಭೇಟಿ ಮಾಡಿದ್ದಾರೆ.

ಡೆವಿಲ್‌ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ
ರೇಣುಕಾಸ್ವಾಮಿ ಪ್ರಕರಣದ ನಂತರ ದರ್ಶನ್‌ ಬಹಳ ಬದಲಾಗಿದ್ದಾರೆ. ಅವರ ಮೃದು ಸ್ವಾಭಾವ ಕಾಣಿಸುತ್ತಿದೆ. ಜೈಲಿನಿಂದ ಹೊರಬಂದಮೇಲೆ ಸ್ವಲ್ಪ ದಿನ ಬೆನ್ನು ನೋವಿಗೆ ಚಿಕಿತ್ಸೆ ಪಡೆದು ಮತ್ತೆ ಶೂಟಿಂಗ್‌ಗೆ ಹಾಜರಾಗಿದ್ದು, ಬಹಳ ಬೇಗ ಸಿನಿಮಾ ಮುಗಿಸುವ ಗುರಿ ಇಟ್ಟುಕೊಂಡಿದ್ದಾರೆ. ಇನ್ನು ಪ್ರಕರಣ ದಾಖಲಾಗಿದ್ದ ಕಾರಣದಿಂದ ಶೂಟಿಂಗ್‌ ಮಾಡಲು ವಿದೇಶಕ್ಕೆ ಹೋಗಲು ಕೋರ್ಟ್‌ ಅನುಮತಿ ಕೊಟ್ಟಿರಲಿಲ್ಲ, ಆದರೆ ಇದೀಗ ಅದಕ್ಕೂ ಸಹ ಅನುಮತಿ ಸಿಕ್ಕಿದ್ದು, ಬಹಳ ಮೇಲೆ ದರ್ಶನ ತೆರೆಮೇಲೆ ಕಾಣಿಸಲಿದ್ದಾರೆ ಎನ್ನಬಹುದು.

ಹೆಚ್ಚಿನ ಸುದ್ದಿ

Change Language »
error: Content is protected !!