Friday, April 25, 2025
Homeಟಾಪ್ ನ್ಯೂಸ್Actor Darshan : ಜೈಲಿನಿಂದ ಬಂದ ದರ್ಶನ್‌ಗೆ ನಿವಾಸದ ಬಳಿ ಅದ್ದೂರಿ ಸ್ವಾಗತ - ಅಭಿಮಾನಿಗಳಿಗೆ...

Actor Darshan : ಜೈಲಿನಿಂದ ಬಂದ ದರ್ಶನ್‌ಗೆ ನಿವಾಸದ ಬಳಿ ಅದ್ದೂರಿ ಸ್ವಾಗತ – ಅಭಿಮಾನಿಗಳಿಗೆ ಪುತ್ರನ ಸಾಂತ್ವನ! VIDEO

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿ ಈಗ ಮಧ್ಯಂತರ ಜಾಮೀನು ಪಡೆದು ಹೊರಬಂದಿರುವ ನಟ ದರ್ಶನ್‌ಗೆ ಬುಧವಾರ ರಾತ್ರಿ ನಿವಾಸದ ಬಳಿ ಅದ್ದೂರಿ ಸ್ವಾಗತ ದೊರೆತಿದೆ. ದರ್ಶನ್‌ ಮಾತನಾಡಬೇಕೆಂದು ಪಟ್ಟು ಹಿಡಿದು  ನೆರೆದಿದ್ದ ಜನರನ್ನು ಸ್ವತಃ ದರ್ಶನ್‌ ಪುತ್ರ ವಿನೀತ್‌ ಸಮಾಧಾನ ಪಡಿಸಿ ಕಳಿಸಿದ್ದಾರೆ.

ದರ್ಶನ್‌ ನಿವಾಸದ ಬಳಿ ನೂರಾರು ಮಂದಿ ಅರ್ಧರಾತ್ರಿಯಲ್ಲಿಯೂ ನೆರೆದಿದ್ದರು. ತಡರಾತ್ರಿಯಲ್ಲಿಯೂ ಡಿ ಬಾಸ್‌ ಡಿ ಬಾಸ್‌ ಎಂದು ಜೈಕಾರ ಹಾಕುತ್ತಾ ತಮ್ಮ ಅಭಿಮಾನ ಪ್ರದರ್ಶಿಸಿದರು.

ಅಲ್ಲದೇ ಅ.31 ಗುರುವಾರ ದರ್ಶನ್‌ ಪುತ್ರ ವಿನೀಶ್‌ ಜನ್ಮದಿನವೂ ಸಹ ಆಗಿದೆ. ಪುತ್ರನ ಹುಟ್ಟುಹಬ್ಬದ ದಿನವೇ ದರ್ಶನ್‌ ಬಿಡುಗಡೆಯಾಗಿರುವುದು ದರ್ಶನ್‌ ಕುಟುಂಬಸ್ಥರ ಸಂತಸವನ್ನು ಇಮ್ಮಡಿಗೊಳಿಸಿದೆ. ಮಗನ ಜನ್ಮದಿನೋತ್ಸವದಲ್ಲಿ ಪಾಲ್ಗೊಂಡ ಬಳಿಕ ದರ್ಶನ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!