ಇಟಲಿ: ಇಟಲಿಯಲ್ಲಿ (Italy) ನಡೆದ GT4 ಯುರೋಪಿಯನ್ (European) ಸರಣಿಯಲ್ಲಿ ನಟ ಅಜಿತ್ ಕುಮಾರ್ (Actor Ajith Kumar) ಅವರ ಕಾರು ಅಪಘಾತಕ್ಕೀಡಾಗಿದ್ದು (Accident), ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
GT4 ಯುರೋಪಿಯನ್ ಸರಣಿಯಲ್ಲಿ ಅಪಘಾತ
ಇಟಲಿಯಲ್ಲಿ ನಡೆಯುತ್ತಿದ್ದ GT4 ಯುರೋಪಿಯನ್ ಸರಣಿಯ ಎರಡನೇ ಸುತ್ತಿನಲ್ಲಿ ಭಾಗವಹಿಸುತ್ತಿದ್ದಾಗ ಮಿಸಾನೊ ಟ್ರ್ಯಾಕ್‌ನಲ್ಲಿ ಈ ಘಟನೆ ಸಂಭವಿಸಿದೆ. ಆದರೆ ಅಜಿತ್‌ಗೆ ಯಾವುದೇ ಅಪಾಯವಾಗಿಲ್ಲ. ಇನ್ನು ಅಪಘಾತದ ಕಾರಣದಿಂದ ಆಟದಿಂದ ಅಜಿತ್ ಹಿಂದೆ ಸರಿಯಬೇಕಾಗಿ ಬಂದಿದ್ದು, ನಟ ಸ್ವಲ್ಪ ಸಮಯ ವಿರಾಮ ತೆಗೆದುಕೊಂಡು ರೇಸ್‌ಟ್ರಾಕ್‌ನಲ್ಲಿ ಅಪಘಾತದಿಂದ ಉಂಟಾದ ಅವಶೇಷಗಳನ್ನ ಸ್ವಚ್ಛಗೊಳಿಸಲು ನೆಲದ ಸಿಬ್ಬಂದಿಗೆ ಸಹಾಯ ಮಾಡಿದ್ದು, ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.
ಅಜಿತ್ ಸದ್ಯ ಬೆಲ್ಜಿಯಂನ ಸ್ಪಾ-ಫ್ರಾಂಕೋರ್‌ಚಾಂಪ್ಸ್ ಸರ್ಕ್ಯೂಟ್‌ನಲ್ಲಿ ಮೂರನೇ ಸುತ್ತಿಗೆ ತಯಾರಿ ನಡೆಸುತ್ತಿದ್ದಾರೆ. ಇನ್ನು ಅಪಘಾತದ ನಂತರ್ ಅಜಿತ್ ಮಾಡುತ್ತಿರುವ ಕೆಲಸ ನೋಡಿ ಅನೇಕರು ಹೊಗಳಿದ್ದು, ಅಪಘಾತದ ಸ್ಥಳದಲ್ಲಿ ಶುಚಿಗೊಳಿಸುವ ಸಿಬ್ಬಂದಿಗೆ ಸಹಾಯ ಮಾಡುತ್ತಾ, ತಮ್ಮ ಸರಳ ಸ್ವಭಾವವನ್ನು ಪ್ರದರ್ಶಿಸಿದ್ದಾರೆ ಎಂದು ಹೇಳುತ್ತಿದ್ದಾರೆ.
Out of the race with damage, but still happy to help with the clean-up.
Full respect, Ajith Kumar 🫡
📺 https://t.co/kWgHvjxvb7#gt4europe I #gt4 pic.twitter.com/yi7JnuWbI6
— GT4 European Series (@gt4series) July 20, 2025
2003 ರಿಂದ ರೇಸಿಂಗ್ ಮಾಡ್ತಿದ್ದಾರೆ ನಟ
2003 ರಲ್ಲಿ ರೇಸಿಂಗ್ ಕ್ಷೇತ್ರವನ್ನು ಪ್ರವೇಶಿಸಿದ ಅಜಿತ್ ಅಂದಿನಿಂದ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ, 2010 ರಲ್ಲಿ ಫಾರ್ಮುಲಾ 2 ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದರು. ಅವರು ಜರ್ಮನಿ ಮತ್ತು ಮಲೇಷ್ಯಾ ಸೇರಿದಂತೆ ವಿವಿಧ ದೇಶಗಳಲ್ಲಿ ರೇಸ್‌ಗಳನ್ನ ಭಾಗವಹಿಸಿದ್ದು, ತಮ್ಮ ನಟನಾ ವೃತ್ತಿ ಮತ್ತು ರೇಸಿಂಗ್‌ನ ಮೇಲಿನ ಉತ್ಸಾಹ ಎರಡನ್ನೂ ಸಮತೋಲನದಿಂದ ಅವರ ಬೆಳೆಸಿಕೊಂಡು ಹೋಗುತ್ತಿದ್ಧಾರೆ.
ಈ ಹಿಂದೆಯೂ ಅಪಘಾತಕ್ಕೀಡಾಗಿದ್ದ ನಟನ ಕಾರು
ಏಪ್ರಿಲ್ 19ರಂದು ತರಬೇತಿ ಪಡೆಯುತ್ತಿರುವಾಗ ಕಾರು ಹೋಗಿ ಕಟ್ಟೆಗೆ ಗುದ್ದಿದೆ. ಮಳೆಯ ಕಾರಣಕ್ಕೆ ಟ್ರ್ಯಾಕ್ ಒದ್ದೆ ಆಗಿತ್ತು. ಹೀಗಾಗಿ ಕಾರು ಅಜಿತ್ ನಿಯಂತ್ರಣಕ್ಕೆ ಸಿಕ್ಕಿಲ್ಲ. ಘಟನೆಯಿಂದ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಅಜಿತ್ ಅವರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಹಿಂದೆ ಫೆ.23 ರಂದು ಸ್ಪೇನ್ನಲ್ಲಿ ಕಾರ್ ರೇಸ್ ವೇಳೆ ನಡೆದ ಅವಘಡದಲ್ಲಿ ಅಜಿತ್ ಅವರು ಮೊಟ್ಟ ಮೊದಲ ಬಾರಿಗೆ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ದುಬೈನಲ್ಲೂ ಇದೇ ರೀತಿಯ ಘಟನೆ ನಡೆಯಿತು. ಈ ಘಟನೆಗಳಿಂದಾಗಿ ಅಜಿತ್ ಅವರು ಹೆಚ್ಚು ಜಾಗರೂಕರಾಗಬೇಕು ಎಂದು ಅಭಿಮಾನಿಗಳು ವಿನಂತಿಸಿಕೊಂಡಿದ್ದರು.
ಇನ್ನು ಇತ್ತೀಚೆಗೆ, ಸಿನಿಮಾ ಮತ್ತು ಮೋಟಾರ್‌ಸ್ಪೋರ್ಟ್ಸ್‌ಗೆ ಅವರು ನೀಡಿದ ಕೊಡುಗೆಯನ್ನ ಗುರುತಿಸಿದ ಭಾರತ ಸರ್ಕಾರವು ಅಜಿತ್ ಕುಮಾರ್ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 2025 ರಲ್ಲಿ, ಅಜಿತ್ ತಮಿಳು ಚಿತ್ರರಂಗಕ್ಕೆ ಗುಡ್ ಬ್ಯಾಡ್ ಅಗ್ಲಿ ಸಿನಿಮಾ ಮೂಲಕ ತೆರೆ ಮೇಲೆ ಕಾಣಿಸಿದ್ದು, ತಮಿಳಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ಸಹ ಪಾತ್ರವಾಗಿದೆ. ಸದ್ಯ ನಟ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.