Saturday, January 25, 2025
Homeರಾಜ್ಯಮಹಿಳೆಯನ್ನು ನಿಂದಿಸಿ ಹಲ್ಲೆ ಆರೋಪ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿರುದ್ಧ ಎಫ್‌ಐಆರ್

ಮಹಿಳೆಯನ್ನು ನಿಂದಿಸಿ ಹಲ್ಲೆ ಆರೋಪ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿರುದ್ಧ ಎಫ್‌ಐಆರ್

ಕೋಲಾರ: ಮಹಿಳೆಯನ್ನು ನಿಂದಿಸಿ ಹಲ್ಲೆ ಮಾಡಿದ ಆರೋಪದಡಿ ಕೋಲಾರದ ಮುಳಬಾಗಿಲು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಮುಳಬಾಗಿಲು ತಾಲೂಕಿನ ಯಲವಳ್ಳಿ ಗ್ರಾಮದ ಸರ್ವೆ ನಂ.65ರಲ್ಲಿ 2 ಎಕರೆ 10 ಗುಂಟೆ ಜಮೀನು ಲಪಟಾಯಿಸಲು ಮುಂದಾಗಿದ್ದ ಕೊತ್ತೂರು ಅಂಜು ಬಾಸ್ ಅಲಿಯಾಸ್ ಆಂಜನೇಯಲು ವಿರುದ್ಧ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಅಂಜು ಬಾಸ್ ಚಂಗಮ್ಮಾ ಎಂಬ ಮಹಿಳೆಯ ಬಳಿ ಒಂದು ಎಕರೆ ಕ್ರಯ ಮಾಡಿಸಿಕೊಂಡು 2 ಎಕರೆ ಜಮೀನಿಗೆ ತಂತಿ ಬೇಲಿ ಹಾಕಿಕೊಂಡಿದ್ದರು. ಇದನ್ನು ಪ್ರಶ್ನೆ ಮಾಡಿದ ಮಹಿಳೆಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆಂಬಲಿಗರಿಂದ ಧಮ್ಕಿ ಹಾಕಿಸಿದ್ದರು. ಜಮೀನು ವ್ಯಾಜ್ಯ ಹಿನ್ನೆಲೆಯಲ್ಲಿ ಮಹಿಳೆ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 

ಮಹಿಳೆ ನೀಡಿರುವ ದೂರಿನ ಅನ್ವಯ ಅಂಜು ಬಾಸ್, ಮುರಳಿ, ಸುರೇಶ್ ಸೇರಿದಂತೆ 4 ಜನರ ವಿರುದ್ಧ ಐಪಿಸಿ ಸೆಕ್ಷನ್ 504, 143, 149, 323, 354ರ ಅಡಿಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!