ಗದಗ : ಸರ್ಕಾರಿ ಸಾರಿಗೆ ಬಸ್ ಚಕ್ರದಡಿ ಸಿಲುಕಿ ಬೈಕ್ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಮುಳಗುಂದ ನಾಕಾದ ಬಸ್ ಡಿಪೋ ಬಳಿ ಇಂದು ನಡೆದಿದೆ.
ಈ ದುರ್ಘಟನೆಯಲ್ಲಿ ಈರಪ್ಪ ಕಣಗಿನಹಾಳ (50) ಎಂಬುವವರು ಸಾವನ್ನಪ್ಪಿದ್ದಾರೆ. ಮಾರ್ಕೆಟ್ ಏರಿಯಾದಿಂದ ಹುಬ್ಬಳ್ಳಿ ರಸ್ತೆ ಕಡೆಗೆ ಈರಪ್ಪ ತೆರಳುತ್ತಿದ್ದಾಗ, ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾರೆ. ಆಗ ಚಲಿಸುತ್ತಿದ್ದ ಬಸ್ ಚಕ್ರದಡಿ ಸಿಲುಕಿ ದುರ್ಮರಣಹೊಂದಿದ್ದಾರೆ ಎಂದು ತಿಳಿದುಬಂದಿದೆ.
ಹಾನಗಲ್ ಮಾರ್ಗವಾಗಿ ಹೊರಟಿದ್ದ ಬಸ್ ಚಕ್ರದಡಿ ಸಿಲಿಕಿ ಈರಣ್ಣ ಮೃತಪಟ್ಟಿದ್ದಾರೆ. ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ.