ನಟ ದಿ. ಅಂಬರೀಶ್ ಮತ್ತು ಸಂಸದೆ ಸುಮಲತಾ ಪುತ್ರ ಅಭಿಷೇಕ್ ವಿವಾಹಕ್ಕೆ ದಿನಾಂಕ ನಿಷ್ಕರ್ಷೆಗೊಂಡಿದೆ. ಸ್ವತಃ ಸುಮಲತಾ ಹಾಗೂ ಅಭಿಷೇಕ್ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮದುವೆಗೆ ಆಹ್ವಾನಿಸಿದ್ದಾರೆ. ಅಭಿಷೇಕ್ ಪ್ರಧಾನಿಯವರೊಡನೆ ಇರುವ ಫೋಟೋ ಈಗ ಎಲ್ಲೆಡೆ ವೈರಲ್ ಆಗಿದೆ.
ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ಇಬ್ಬರದೂ ಪ್ರೇಮವಿವಾಹವಾಗಿದ್ದು, ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ ಕಳೆದ ಡಿಸೆಂಬರ್ ನಲ್ಲಿ ನಿಶ್ಚಿತಾರ್ಥ ನಡೆದಿತ್ತು. ಅಭಿಷೇಕ್ ಕೈಹಿಡಿಯಲಿರುವ ಅವಿವಾ ಬಿದ್ದಪ್ಪ ಮಾಡೆಲಿಂಗ್ ಮತ್ತು ಫ್ಯಾಷನ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.