Wednesday, February 19, 2025
Homeಟಾಪ್ ನ್ಯೂಸ್ಆಪ್ ಈಗ ರಾಷ್ಟ್ರೀಯ ‌ಪಕ್ಷ: ಸ್ಥಾನಮಾನ ಕಳೆದುಕೊಂಡ ಟಿಎಂಸಿ, ಎನ್ ಸಿಪಿ

ಆಪ್ ಈಗ ರಾಷ್ಟ್ರೀಯ ‌ಪಕ್ಷ: ಸ್ಥಾನಮಾನ ಕಳೆದುಕೊಂಡ ಟಿಎಂಸಿ, ಎನ್ ಸಿಪಿ

ನವದೆಹಲಿ: ಅರವಿಂದ್ ಕೇಜ್ರಿವಾಲ್ ನಾಯಕತ್ವದ ಆಮ್ ಆದ್ಮಿ ಪಕ್ಷವು ಈಗ ರಾಷ್ಟ್ರೀಯ ಪಕ್ಷ ಎನ್ನುವಂತಹ ಸ್ಥಾನಮಾನವನ್ನು ಪಡೆದಿದೆ.

ಸದ್ಯ ಆಮ್ ಆದ್ಮಿ ಪಕ್ಷವು ಪಂಜಾಬ್ ಮತ್ತು ದೆಹಲಿಯಲ್ಲಿ ಅಧಿಕಾರದಲ್ಲಿದೆ.

ಇದೇ ಸಂದರ್ಭ ಶರದ್ ಪವಾರ್ ಅವರ ಎನ್ ಸಿಪಿ, ಮಮತಾ ಬ್ಯಾನರ್ಜಿ ಅವರ ಟಿಎಂಸಿ ಮತ್ತು ಸಿಪಿಐ ಪಕ್ಷಗಳು ಪ್ರಾದೇಶಿಕ ಪಕ್ಷಗಳಾಗಿವೆ ಮತ್ತು ರಾಷ್ಟ್ರೀಯ ಪಕ್ಷಗಳ ಸ್ಥಾನವನ್ನು ಕಳೆದುಕೊಂಡಿದೆ.

ಒಂದು ಪಕ್ಷ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆಯಬೇಕಾದರೆ ಆ ಪಕ್ಷ ನಾಲ್ಕು ಅಥವಾ ಹೆಚ್ಚು ರಾಜ್ಯಗಳಲ್ಲಿ ರಾಜ್ಯ ಪಕ್ಷ ಎಂದು ಗುರುತಿಸಿಕೊಂಡಿರಬೇಕು ಅಥವಾ ಲೋಕಸಭೆಯಲ್ಲಿ ಎರಡು ಶೇಕಡಾಕ್ಕಿಂತ ಹೆಚ್ಚು ಸೀಟುಗಳನ್ನು ಹೊಂದಿರಬೇಕು ಎಂದು ನಿಯಮಗಳು ತಿಳಿಸುತ್ತವೆ.

ಒಂದು ಪಕ್ಷ ರಾಷ್ಟ್ರೀಯ ಪಕ್ಷ ಎನ್ನುವಂತಹ ಸ್ನಾನಮಾನವನ್ನು ಕಳೆದುಕೊಂಡರೆ ಕೆಲ ರಾಜ್ಯಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುವಾಗ ಅವರಿಗೆ ಪಕ್ಷದ ಚಿಹ್ನೆಗಳು ಸಿಗುವುದಿಲ್ಲ.

ಉದಾಹರಣೆಗೆ ತೃಣಮೂಲ‌ ಕಾಂಗ್ರೆಸ್ ಅಭ್ಯರ್ಥಿಯೊಬ್ಬ ಕರ್ನಾಟಕದಲ್ಲಿ ಸ್ಪರ್ಧಿಸುವುದಾದರೆ ತೃಣಮೂಲ ಪಕ್ಷದ ಚಿಹ್ನೆ ಅಡಿ ಸ್ಪರ್ಧಿಸಲು ಸಾಧ್ಯವಿಲ್ಲ.

ಹೆಚ್ಚಿನ ಸುದ್ದಿ

error: Content is protected !!