ನರೇಂದ್ರ ಮೋದಿ ವಿರುದ್ಧ ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ ಮಾಡೋದಾಗಿ ಹೇಳಿದೆ. ಹನ್ನೊಂದು ಭಾಷೆಗಳಲ್ಲಿ ದೇಶಾದ್ಯಂತ ಪೋಸ್ಟರ್ ಅಂಟಿಸಿ ಪ್ರೊಟೆಸ್ಟ್ ಮಾಡೋದಾಗಿ ಆಮ್ ಆದ್ಮಿ ಪಾರ್ಟಿ ತಿಳಿಸಿದೆ.
ಮೋದಿ ಇಳಿಸಿ ದೇಶ ಉಳಿಸಿ ಎಂದು ಪ್ರತಿಭಟನೆಗಿಳಿದಿರುವ ಆಮ್ ಆದ್ಮಿ ಪಾರ್ಟಿ ಮಾರ್ಚ್ 30 ರಂದು ಪೋಸ್ಟರ್ ಪ್ರೊಟೆಸ್ಟ್ ಹಮ್ಮಿಕೊಂಡಿದ್ದು, ಈಗಾಗಲೇ 11 ಭಾಷೆಗಳಲ್ಲೂ ಪೋಸ್ಟರ್ ಸಿದ್ದಪಡಸಲಾಗಿದೆ ಎಂದು ಎಎಪಿ ದೆಹಲಿ ರಾಜ್ಯ ಸಂಚಾಲಕ ಹಾಗೂ ಪರಿಸರ ಸಚಿವರೂ ಆಗಿರುವ ಗೋಪಾಲ್ ರೈ ತಿಳಿಸಿದ್ದಾರೆ.
ಕಳೆದವಾರ ಮೋದಿ ಹಠಾವೋ ಪೋಸ್ಟರ್ ಗಳನ್ನು ತೆರವುಗೂಳಿಸಿ 6 ಮಂದಿ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಎಎಪಿ ಈಗ ದೇಶದಾದ್ಯಂತ ಪೋಸ್ಟರ್ ಅಂಟಿಸಿ ಪ್ರತಿಭಟಿಸಲು ಸಜ್ಜಾಗಿದ್ದು ಎಲ್ಲಾ ರಾಜ್ಯದಲ್ಲೂ ಈ ಪ್ರೊಟೆಸ್ಟ್ ನಡೆಸಲಿದೆ