Wednesday, August 19, 2026
Homeಟಾಪ್ ನ್ಯೂಸ್TECH: ಹಾರ್ಡ್ ಕಾಪಿ ಬೇಡ.. ಅಗತ್ಯ ದಾಖಲೆಗಳು​​​​​ ಈಗ ವಾಟ್ಸಾಪ್​​​​ನಲ್ಲೇ ಲಭ್ಯ..

TECH: ಹಾರ್ಡ್ ಕಾಪಿ ಬೇಡ.. ಅಗತ್ಯ ದಾಖಲೆಗಳು​​​​​ ಈಗ ವಾಟ್ಸಾಪ್​​​​ನಲ್ಲೇ ಲಭ್ಯ..

ಭಾರತೀಯರ ದೈನಂದಿನ ಬದುಕಿನಲ್ಲಿ ಆಧಾರ್ ಕಾರ್ಡ್ (Aadhar Card) ಈಗ ಕಡ್ಡಾಯ ದಾಖಲೆ. ಶಾಲೆ, ಬ್ಯಾಂಕ್, ಪಿಂಚಣಿ, ಗ್ಯಾಸ್ ಸಬ್ಸಿಡಿ, ವಿದ್ಯಾರ್ಥಿವೇತನ ಯಾವ (Tech Tips) ಸೇವೆಯಾದರೂ ಆಧಾರ್ ಅಗತ್ಯ. ಗ್ರಾಮೀಣ ಭಾಗದಲ್ಲಿ ಹಾರ್ಡ್ ಕಾಪಿ ಹೆಚ್ಚು ಬಳಸಲಾಗುತ್ತದಾದರೂ, ನಗರಗಳಲ್ಲಿ ಡಿಜಿಟಲ್ ಪ್ರತಿಗೆ ಬೇಡಿಕೆ ಹೆಚ್ಚುತ್ತಿದೆ.

ಸರ್ಕಾರ ಡಿಜಿಟಲ್ ಇಂಡಿಯಾ ಯೋಜನೆ ಅಡಿಯಲ್ಲಿ ಸೇವೆಗಳನ್ನು ಇನ್ನಷ್ಟು ಸರಳಗೊಳಿಸಿದ್ದು, ಈಗ MyGov WhatsApp HelpDesk ಮೂಲಕವೂ ಆಧಾರ್ ಕಾರ್ಡ್ ಪಡೆಯುವ ಅವಕಾಶ ಕಲ್ಪಿಸಿದೆ. UIDAI ವೆಬ್‌ಸೈಟ್, mAadhaar ಅಥವಾ DigiLocker ಬಳಸಲು ಸಾಧ್ಯವಿಲ್ಲದ ಸಂದರ್ಭಗಳಲ್ಲಿ, ವಾಟ್ಸಾಪ್ ಮತ್ತೊಂದು ಸುಲಭ ಆಯ್ಕೆಯಾಗಿದೆ. ಯಾವುದೇ ಸಮಯದಲ್ಲೂ ಬೇಕಾದ ದಾಖಲೆಗಳನ್ನು ವಾಟ್ಸಾಪ್ ಮೂಲಕ ಪಡೆಯಬಹುದು.

Aadhaar Download Made Easy on Whats App Follow This Guide tech tips

ಭಾರತ ಸರ್ಕಾರದ MyGov WhatsApp HelpDesk ಅಧಿಕೃತ ಡಿಜಿಟಲ್ ಸೇವಾ ವೇದಿಕೆ. ಇದರಿಂದ ಆಧಾರ್ ಸೇರಿದಂತೆ ಹಲವು ದಾಖಲೆಗಳನ್ನು ಸುಲಭವಾಗಿ ಪಡೆಯಬಹುದಾಗಿದೆ. ಸೇವೆ ಬಳಸಲು 9013151515 ಸಂಖ್ಯೆಗೆ Hi ಎಂದು ಸಂದೇಶ ಕಳುಹಿಸಿದರೆ ಸಾಕು ನಿಮ್ಮ ದಾಖಲೆ ಕ್ಷಣಾರ್ಧದಲ್ಲಿ ಕೈ ಸೇರುತ್ತದೆ.

MyGovt WhatsApp HelpDesk  ನಿಂದ ಆಗುವ ಪ್ರಯೋಜನಗಳೇನು.?

  • 24/7 ಲಭ್ಯತೆ – ಯಾವ ಸಮಯದಲ್ಲಾದರೂ ಉಪಯೋಗಿಸಬಹುದು.
  • ಸರಳ ಬಳಕೆ – ಸಾಮಾನ್ಯ ವಾಟ್ಸಾಪ್ ಚಾಟ್‌ನಂತೆ ಕಾರ್ಯನಿರ್ವಹಿಸುವುದರಿಂದ ತಾಂತ್ರಿಕ ಜ್ಞಾನ ಕಡಿಮೆ ಇದ್ದರೂ ಬಳಸಬಹುದು.
  • ಬಹುಭಾಷಾ ಬೆಂಬಲ – ಕನ್ನಡ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಲ್ಲಿ ಮಾಹಿತಿ ದೊರೆಯುತ್ತದೆ.
  • ಸರಕಾರಿ ಸೇವೆಗಳ ಪ್ರವೇಶ,  ಆಧಾರ್, ಪ್ಯಾನ್ ಕಾರ್ಡ್, ಲಸಿಕೆ ಪ್ರಮಾಣ ಪತ್ರ, ಪಿಎಫ್ ಮಾಹಿತಿ, ರೈಲು ಟಿಕೆಟ್‌ಗಳಂತಹ ಹಲವಾರು ಸೇವೆಗಳ ಮಾಹಿತಿ ಪಡೆಯಬಹುದು.
  • ಮಾಹಿತಿ ನಿಖರತೆ – ನೇರವಾಗಿ ಸರಕಾರದ ಅಧಿಕೃತ ಮೂಲಗಳಿಂದ ಬರುತ್ತದೆ; ಆದ್ದರಿಂದ ನಕಲಿ ಸುದ್ದಿಗಳಿಗೆ ಒಳಗಾಗುವ ಸಾಧ್ಯತೆ ಕಡಿಮೆ.
  • ಪೇಪರ್‌ಲೆಸ್ ಸೌಲಭ್ಯ – ಡಿಜಿಟಲ್ ದಾಖಲೆಗಳನ್ನು ನೇರವಾಗಿ ಮೊಬೈಲ್‌ನಲ್ಲಿ ಪಡೆಯಬಹುದು.
  • ಸಮಯ ಉಳಿತಾಯ – ಸರ್ಕಾರಿ ಕಚೇರಿಗಳಿಗೆ ಹೋಗದೆ, ಕ್ಯೂಗಳಲ್ಲಿ ನಿಲ್ಲದೆ ಸೇವೆ ಪಡೆಯಬಹುದು

Aadhaar Download Made Easy on Whats App Follow This Guide tech tips

MyGovt WhatsApp HelpDesk ನಲ್ಲಿ ಯಾವೆಲ್ಲ ದಾಖಲೆ ಲಭ್ಯವಿರುತ್ತದೆ.

  • ಆಧಾರ್ ಕಾರ್ಡ್ (e-Aadhaar)
  • ಪ್ಯಾನ್ ಕಾರ್ಡ್
  • ಡ್ರೈವಿಂಗ್ ಲೈಸೆನ್ಸ್
  • ವಾಹನ ನೋಂದಣಿ ಪ್ರಮಾಣಪತ್ರ (RC)
  • CBSE ಅಂಕಪಟ್ಟಿ ಹಾಗೂ ಶೈಕ್ಷಣಿಕ ದಾಖಲೆಗಳು
  • ವಿಮಾ ಪಾಲಿಸಿ ದಾಖಲೆಗಳು
  • ಲಸಿಕೆ ಪ್ರಮಾಣಪತ್ರ (Covid-19 Vaccination Certificate)
  • ಪಾಸ್ಪೋರ್ಟ್ ಸೇವೆಗಳ ಮಾಹಿತಿ
  • ಪಿಂಚಣಿ ಮತ್ತು EPFO ಸಂಬಂಧಿತ ವಿವರಗಳು

Aadhaar Download Made Easy on Whats App Follow This Guide tech tips

MyGov WhatsApp HelpDesk ಮೂಲಕ ದಾಖಲೆ ಪಡೆಯುವ ವಿಧಾನ:

  • 9013151515 ಸಂಖ್ಯೆಗೆ Hi ಎಂದು ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಿ.
  • ತೆರುವ ಮೆನುನಲ್ಲಿ ಬೇಕಾದ ಸೇವೆ/ದಾಖಲೆ ಆಯ್ಕೆಮಾಡಿ.
  • ಕೇಳಿದರೆ OTP ನಮೂದಿಸಿ.
  • ಪರಿಶೀಲನೆ ಬಳಿಕ ದಾಖಲೆ ನೇರವಾಗಿ ವಾಟ್ಸಾಪ್‌ ಚಾಟ್‌ಗೆ ಬರುತ್ತದೆ.

ಹೆಚ್ಚಿನ ಸುದ್ದಿ

Change Language »
error: Content is protected !!