Saturday, November 2, 2024
Homeಟಾಪ್ ನ್ಯೂಸ್ಮೆಟ್ರೋದಲ್ಲಿ ಬಿಕಿನಿ ಗರ್ಲ್ : ದೇಹಪ್ರದರ್ಶನ ಮಾಡಬೇಡಿ ಎಂದ ದೆಹಲಿ ಮೆಟ್ರೋ

ಮೆಟ್ರೋದಲ್ಲಿ ಬಿಕಿನಿ ಗರ್ಲ್ : ದೇಹಪ್ರದರ್ಶನ ಮಾಡಬೇಡಿ ಎಂದ ದೆಹಲಿ ಮೆಟ್ರೋ

ನವದೆಹಲಿ: ಯುವತಿಯೊಬ್ಬಳು ಬಿಕಿನಿ ತೊಟ್ಟು ದೆಹಲಿ ಮೆಟ್ರೋದಲ್ಲಿ ಪ್ರಯಾಣ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.

ಯುವತಿ ದೆಹಲಿ ಮೆಟ್ರೋದಲ್ಲಿ ಸಂಚರಿಸುತ್ತಿದ್ದ ವೇಳೆ ಪ್ರಯಾಣಿಕನೊಬ್ಬ ವೀಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಫುಲ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಕೆಲವರು ಇದು ಪ್ರಜಾಪ್ರಭುತ್ವ, ಸ್ವಾತಂತ್ರ್ಯದ ಹಕ್ಕು ಎಂದು ಆಕೆಯನ್ನು ಬೆಂಬಲಿಸಿದರೆ ಉಳಿದವರು ಆಕೆಯ ನಡವಳಿಕೆಯನ್ನು ಖಂಡಿಸಿದ್ದಾರೆ. ಮೆಟ್ರೋ ಸಿಬ್ಬಂದಿ ಆಕೆಯನ್ನು ಹೇಗಾದರೂ ಒಳಗೆ ಬಿಟ್ಟರು? ಎಂದು ಪ್ರಶ್ನಿಸಿದ್ದಾರೆ. ಮತ್ತಷ್ಟು ಮಂದಿ ಆಕೆಗೆ ದೆಹಲಿಯ ಮೆಟ್ರೊ ಹುಡುಗಿ ಅಂತಾ ಕರೆದಿದ್ದು, ಉರ್ಫಿ ಜಾವೇದ್‌ನಿಂದ ಪ್ರೇರಣೆ ಪಡೆದಿರಬೇಕು, ಪಾಪ ಬಟ್ಟೆ ಖರೀದಿಸಲು ಹಣವಿಲ್ಲ ಅನ್ನಿಸುತ್ತೆ ಎಂದು ವ್ಯಂಗ್ಯ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಎಂಆರ್‌ಸಿ ನಿರ್ದೇಶಕ ಅನುಜ್ ದಯಾಳ್, ಪ್ರತಿದಿನ 60 ಲಕ್ಷ ಮಂದಿ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಆಕೆಯೊಬ್ಬಳನ್ನೇ ಪತ್ತೆಹಚ್ಚಲು ಸಾಧ್ಯವಿಲ್ಲ. ಆದರೆ ಆಕೆ ಅನುಚಿತ ಉಡುಗೆ ಧರಿಸಿರುವುದಕ್ಕಾಗಿ ಕ್ರಮ ಕೈಗೊಳ್ಳಬಹುದು ಎಂದು ಹೇಳಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!