ನಮ್ಮೊಡನಿದ್ದ ತಾರೆ ಅಪ್ಪು ಇಂದು ನಮ್ಮೊಂದಿಗಿಲ್ಲ. ಆದ್ರೆ ಪುನೀತ್ ರಾಜ್‌ಕುಮಾರ್ ಹೆಸರು ಶಾಶ್ವತವಾಗಿ ಆಗಸದಲ್ಲಿ ಮಿಂಚಲಿದೆ. ನಮ್ಮ ನಡುವೆ ತನ್ನ ನಿಷ್ಕಲ್ಮಷ ನಗುವಿನಿಂದಲೇ ಮಿಂಚಿದ್ದ ತಾರೆಯೊಂದು , ಇನ್ನು ಮುಂದೆ ಆಕಾಶದಲ್ಲಿ ಹೊಳೆಯಲಿದೆ. ಕೋಟ್ಯಾಂತರ ನಕ್ಷತ್ರಗಳಲ್ಲಿ ಒಂದು ನಕ್ಷತ್ರಕ್ಕೆ ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಇಡಲಾಗಿದೆ.
ಆಕಾಶದಲ್ಲಿರುವ ಎಣಿಸಲಾಗದ ನಕ್ಷತ್ರಪುಂಜದಲ್ಲಿ ಒಂದು ತಾರೆಗೆ ಅಧಿಕೃತವಾಗಿ ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಇಡಲಾಗಿದೆ. ‘ದಿ ಬಿಗ್ ಲಿಟ್ಲ್’ ಸಂಸ್ಥೆಯು ಈ ಒಳ್ಳೆಯ ಕಾರ್ಯವನ್ನು ಮಾಡಿದ್ದು, ಇದನ್ನು ತಿಳಿಸಲು ವಿಶೇಷ ವಿಡಿಯೋ ಹಂಚಿಕೊಂಡಿದೆ. ಈ ವಿಡಿಯೋಗೆ ವಿಕ್ರಮ್ ರವಿಚಂದ್ರನ್ ಧ್ವನಿ ನೀಡಿದ್ದಾರೆ.
ದೊಡ್ಮನೆ ಮಾಣಿಕ್ಯ, ಅಭಿಮಾನಿಗಳ ಕಣ್ಮಣಿ ಅಪ್ಪು ಹೆಸರನ್ನು ನಕ್ಷತ್ರಲೋಕದಲ್ಲಿ ಶಾಶ್ವತವಾಗಿ ಮಿನುಗುವಂತೆ ಮಾಡಿ, ಆ ಮೂಲಕ ಪುನೀತ್ ರಾಜ್‌ಕುಮಾರ್ ಅವರಿಗೆ ‘ದಿ ಬಿಗ್ ಲಿಟ್ಲ್’ ಸಂಸ್ಥೆ ಗೌರವ ಸಲ್ಲಿಸಿದೆ. ಅಪ್ಪು ಹೆಸರನ್ನು ಶಾಶ್ವತವಾಗಿಸುವ ಈ ಕಾರ್ಯಕ್ಕೆ ಅಭಿಮಾನಿಗಳು ಸಂಸ್ಥೆಗೆ ಥ್ಯಾಂಕ್ಸ್ ಹೇಳಿದ್ದಾರೆ