ತಮಿಳುನಾಡು : ಪ್ರಾಮಾಣಿಕತೆ (Honesty) ಎಲ್ಲರ ಬಳಿಯೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದ್ರೆ ಲಕ್ಷದಲ್ಲಿ ಒಬ್ಬರಿಗೆ ಮಾತ್ರ ಈ ಪರಿ ಪ್ರಾಮಾಣಿಕತೆ ಇರಲು ಸಾಧ್ಯ. ಕಣ್ಣೆದುರೇ ಲಕ್ಷಾಂತರ ಬೆಲೆ ಬಾಳುವ ಚಿನ್ನದ ಆಭರಣಗಳು (Gold jewellers) ಇದ್ದಾಗಲೂ, ಪರರ ವಸ್ತು ನಮಗ್ಯಾಕೆ ಎಂದು ಯೋಚಿಸುವ ಜನ ಎಲ್ಲಿ ಸಿಗ್ತಾರೆ. ತಮಿಳುನಾಡಿನ (Tamilnadu) ಚೆನ್ನೈ ನಲ್ಲಿ ಬಡ ಮಹಿಳೆಯೊಬ್ಬರು ಈ ರೀತಿ ಪ್ರಾಮಾಣಿಕತೆ ತೋರಿದ್ದಾರೆ.
ಚೆನ್ನೈನಲ್ಲಿ ಕಾರ್ಪೊರೇಷನ್ ಸ್ವಚ್ಛತಾ ಕಾರ್ಯಕರ್ತೆ ಆಗಿರುವ ಎಸ್. ಪದ್ಮಾ ಅವರು ತಮಗೆ ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನ ಪೊಲೀಸರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಟಿ ನಗರದ ಬಳಿ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದ ಆಭರಣ ವ್ಯಾಪಾರಿಯೊಬ್ಬರು ತಮ್ಮ ಬ್ಯಾಗ್ ಅನ್ನು ತಳ್ಳುವ ಬಂಡಿಯ ಮೇಲೆ ಬಿಟ್ಟು ಹೊರಟುಹೋಗಿದ್ದರು.
ಇದನ್ನೂ ಓದಿ : ಸಿಕ್ಕಿದ್ದು ನಿಧಿಯಲ್ಲ, ಪುರಾತತ್ವ ಇಲಾಖೆ ಅಧಿಕಾರಿ ಸ್ಪಷ್ಟನೆ; ವಾಪಸ್ ಕೊಡಿ ಎಂದ ಗ್ರಾಮಸ್ಥರು!
ಈ ಆಭರಣಗಳಿದ್ದ ಬ್ಯಾಗ್ ಸ್ವಚ್ಛತಾ ಕಾರ್ಯಕರ್ತೆ ಪದ್ಮಾ ಅವರ ಕೈಗೆ ಸಿಕ್ಕಿದೆ. ಆದ್ರೆ ಒಂದು ಗುಲಗಂಜಿಯಷ್ಟು ಚಿನ್ನಕ್ಕೂ ಆಸೆ ಪಡದ ಮಹಿಕೆ ಆಭರಣಗಳನ್ನು ಪಾಂಡಿ ಬಜಾರ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಮಹಿಳೆಯ ಪ್ರಾಮಾಣಿಕತೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.