ತಮಿಳುನಾಡು : ಕಳ್ಳರನ್ನು ಬಂಧಿಸಬೇಕಾದ ಪೊಲೀಸ್ ಕಾನ್‌ಸ್ಟೆಬಲ್ (Cop) ಓರ್ವ ತಾನೇ ಪೊಲೀಸರ ಅತಿಥಿಯಾಗಿದ್ದಾನೆ. ತಮಿಳುನಾಡಿನ (Tamilnadu) ಕೊಯಮತ್ತೂರಿನಲ್ಲಿ ರೈಲಿನಲ್ಲಿ ತೆರಳುವ ವೇಳೆ ಕಾಲೇಜು ವಿದ್ಯಾರ್ಥಿನಿಗೆ (Student) ಕಿರುಕುಳ ನೀಡಿದ ಆರೋಪ ಈತನ ಮೇಲಿದ್ದು,ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈತನನ್ನು ಬಂಧಿಸಲಾಗಿದೆ.
ಇದನ್ನೂ ಓದಿ : ಅಕ್ರಮ ಸಂಬಂಧದ ಸುಖಕ್ಕೆ ಹೆತ್ತ ಮಗುವನ್ನೇ ಮಾರಿದ ಪಾಪಿ ತಾಯಿ
ಕಾನೂನು ವಿದ್ಯಾರ್ಥಿನಿಯೊಬ್ಬರು ರೈಲಿನಲ್ಲಿ ಕೊಯಮತ್ತೂರಿಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದ್ದು, ಆಕೆಯ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ಆಕೆಗೆ ಕಿರುಕುಳ ನೀಡಿದ್ದಾನೆ. ಇದ್ರಿಂದ ಆಘಾತಕ್ಕೊಳಗಾದ ವಿದ್ಯಾರ್ಥಿನಿ ತಕ್ಷಣ ತನ್ನ ಫೋನ್ ನಲ್ಲಿ ಈತನ ಕೃತ್ಯವನ್ನು ರೆಕಾರ್ಡ್ ಮಾಡಿಕೊಂಡಿದ್ದಾಳೆ. ಆ ನಂತರ ರೈಲ್ವೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾಳೆ.
ಅರಕ್ಕೋಣಂ ರೈಲ್ವೆ ನಿಲ್ದಾಣದಲ್ಲಿ ರೈಲು ನಿಂತ ವೇಳೆ, ಅಧಿಕಾರಿಗಳು ಈ ರೀತಿ ಕಿರುಕುಳ ನೀಡಿದ ಶೇಖ್ ಮೊಹಮ್ಮದ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.ಆ ನಂತರ ಈತ ಕೂಡ ಪೊಲೀಸ್ ಸಿಬ್ಬಂದಿ ಎಂಬ ಮಾಹಿತಿ ಗೊತ್ತಾಗಿದೆ. ಜನರಿಗೆ ರಕ್ಷಣೆ ನೀಡಬೇಕಾದ ಪೆದೆಯೇ ಈ ರೀತಿ ವರ್ತಿಸಿದ್ದಕ್ಕಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.