ಉತ್ತರಪ್ರದೇಶ : ಒಂದು ಬೈಕ್ ನಲ್ಲಿ (Bike) ಇಬ್ಬರು ಹೋಗಬಹುದು. ಮೂವರು ಹೋಗುವ ಪ್ರಸಂಗಗಳು (Triple riding) ಉಂಟು. ಆದ್ರೆ ಅದು ಸಂಚಾರಿ ನಿಯಮಗಳ (Traffic rules violations) ಉಲ್ಲಂಘನೆಯಾಗುತ್ತೆ.ಆದ್ರೆ ಇಲ್ಲೊಬ್ಬ ವ್ಯಕ್ತಿ ತನ್ನ ದ್ವಿಚಕ್ರ ವಾಹನದಲ್ಲಿ ಒಂದಲ್ಲ..ಎರಡಲ್ಲಾ..ಒಟ್ಟು ಆರು ಮಕ್ಕಳನ್ನು ಕೂರಿಸಿಕೊಂಡು ಹೋಗುತ್ತಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಇದನ್ನೂ ಓದಿ : ಪೌರಕಾರ್ಮಿಕರೊಂದಿಗೆ ಸೇರಿ ಬೆಂಗಳೂರು ಬೀದಿ ಸ್ವಚ್ಛಗೊಳಿಸಿದ ಅಮೆರಿಕದ ಪ್ರಜೆ!- VIDEO
ಹೌದು, ಉತ್ತರಪ್ರದೇಶ ಹಾಪುರದಲ್ಲಿ ಈ ಘಟನೆ ನಡೆದಿದ್ದು,ಸದ್ಯ ಒಂದು ಗಡಿಯಲ್ಲಿ 7 ಜನ ಪ್ರಯಾಣಿಸುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೈಕ್ ನ ಹಿಂಬದಿಯ ಸೀಟ್ ನಲ್ಲಿ 4 ಮಕ್ಕಳು, ಮತ್ತು ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲೆ ಇಬ್ಬರು ಮಕ್ಕಳನ್ನು ಈತ ಕೂರಿಸಿಕೊಂಡು ಅಪಾಯಕಾರಿ ಪ್ರಯಾಣ ಬೆಳೆಸಿದ್ದಾನೆ.
ಈ ವೇಳೆ ಸಂಚಾರಿ ಪೊಲೀಸರು ಈ ವ್ಯಕ್ತಿಯನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ವಾಹನದಲ್ಲಿ 6 ಮಕ್ಕಳು ಇರುವುದನ್ನು ನೋಡಿ ಪೋಲಿಸರೇ ದಂಗಾಗಿದ್ದಾರೆ. ಹೀಗಾಗಿ ಆರು ಮಕ್ಕಳನ್ನು ಹೊತ್ತು ಸಾಗುತ್ತಿದ್ದ ಪುಣ್ಯಾತ್ಮನಿಗೆ ಟ್ರಾಫಿಕ್ ಪೊಲೀಸರು ಎರಡೂ ಕೈ ಮುಗಿದು ನಮಸ್ಕರಿಸಿದ್ದಾರೆ. ಮಾತ್ರವಲ್ಲದೇ ವ್ಯಕ್ತಿಗೆ 7 ಸಾವಿರ ರೂ.ದಂಡವನ್ನು ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.