ಉತ್ತರ ಕನ್ನಡ: ಎಣ್ಣೆ ಮತ್ತಿನಲ್ಲಿ ಸ್ವಂತ ಅಣ್ಣನೇ ಒಡ ಹುಟ್ಟಿದ ತಮ್ಮನನ್ನು ಭೀಕರವಾಗಿ ಹತ್ಯೆ ಮಾಡಿ, ನಂತರ ಕೊಂಚವೂ ಅಂಜಿಕೆಯಿಲ್ಲದೆ ತಮ್ಮನ ಹೆಣದ ಮುಂದೆ ಕೂತು ಬೀಡಿ ಸೇದಿರುವಂತಹ ಘಟನೆ ಹೊನ್ನಾವರ ತಾಲೂಕಿನ ಹೆಬ್ಬೈಲ್ ಗ್ರಾಮದಲ್ಲಿ ನಡೆದಿದೆ.
ಉತ್ತರ ಕನ್ನಡದ ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕುಟುಂಬ ಕಲಹ ಈ ಘಟನೆಗೆ ಕಾರಣ ಎನ್ನಲಾಗಿದೆ. ಸುಬ್ರಾಯ್ ನಾಯ್ಕ್ ಕೊಲೆ ಆರೋಪಿಯಾಗಿದ್ದು, 50 ವರ್ಷದ ನಾಗೇಶ್ ನಾಯ್ಕ್ ಕೊಲೆಯಾದ ವ್ಯಕ್ತಿ.
ಈ ಪ್ರಕರಣದಲ್ಲಿ ಸದ್ಯಕ್ಕೆ ಪೊಲೀಸರಿಗೆ ಪ್ರಾಥಮಿಕವಾಗಿ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಈ ಹಿಂದೆ ಅಣ್ಣ ಸುಬ್ರಾಯ್ ನಾಯ್ಕ್ ಮೇಲೆ ತಮ್ಮ ನಾಗೇಶ್ ನಾಯ್ಕ್ ಹಲ್ಲೆ ಮಾಡಿದ್ದ ಎನ್ನಲಾಗಿದ್ದು, ಇದೇ ಸಿಟ್ಟಿನಲ್ಲಿದ್ದ ಸುಬ್ರಾಯ್ ನಾಯ್ಕ್ ಕುಡಿದ ಮತ್ತಿನಲ್ಲಿ ಈ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.