ಬೆಂಗಳೂರು : ಕೆಲ ವಾರಗಳ ಹಿಂದೆ ರಾಜಧಾನಿಯಲ್ಲಿ ಮಳೆ ಅಬ್ಬರಿಸಿ ಬೊಬ್ಬಿರಿದ ಕಾರಣಕ್ಕೆ ಹಲವೆಡೆ ಪ್ರವಾಹ ಉಂಟಾಗಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಅಲ್ಲದೇ ವಿವಿಧೆಡೆ ಮರಗಿಡಗಳು ಧರೆಗೆ ಉರುಳಿದ್ದವು.
ಹೀಗೆ ಬಿದ್ದ ಮರಗಳನ್ನು ಬಿಬಿಎಂಪಿಯವರು ಬುಡ ಸಮೇತ ತೆರವು ಮಾಡದೇ ಹಾಗೇ ಬಿಟ್ಟಿರುವ ಬಗ್ಗೆ ಶಿವನ್ಯಾ ಎಂಬ 7-8 ವರ್ಷದ ವಿದ್ಯಾರ್ಥಿನಿ ಧ್ವನಿ ಎತ್ತುವ ಮೂಲಕ ಗಮನ ಸೆಳೆದಿದ್ದಾಳೆ.
ಮಾನ್ಯ ಮುಖ್ಯಮಂತ್ರಿಗಳು, ಬಿಬಿಎಂಪಿ ಕಮಿಷನರ್ ಮತ್ತು ಡಿಕೆಶಿಯವರಿಗೊಂದು ಕಳಕಳಿಯ ಮನವಿ.@CMofKarnataka @DKShivakumar @BBMPCOMM @BBMPAdmn @bbmpcommr @BBMP_Cares pic.twitter.com/3oqUKmuXJs
— Venky_Adiga (@Anchor_Venky) November 4, 2024
ಮಲ್ಲೇಶ್ವರ ಬಳಿಯ ವೈಯಾಲಿಕಾವಲ್‌ನ 13ನೇ ಕ್ರಾಸ್‌ನಲ್ಲಿ ಮಳೆಗೆ ದೊಡ್ಡ ಮರವೊಂದು ಬಿದ್ದಿತ್ತು. ಬಿಬಿಎಂಪಿಯವರು ಅದನ್ನು ಬುಡ ಸಮೇತ ತೆಗೆಯಿರಿ. ಹಾಗೇ ಇರುವುದರಿಂದ ಸಮಸ್ಯೆಯಾಗುತ್ತಿದೆ. ಬುಡ ಸಮೇತ ತೆರವು ಮಾಡಿದರೆ ಅಲ್ಲಿ ನಾನೇ ಹೊಸದಾಗಿ ಗಿಡ ನೆಡುವೆ. ಇದು ನನ್ನ ಶಪಥ ಎಂದು ಸಿಎಂ ಹಾಗೂ ಬಿಬಿಎಂಪಿಗೆ ಶಿವನ್ಯಾ ಮನವಿ ಮಾಡಿದ್ದಾಳೆ. ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.