ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಬಾಲಕಿಯ ಮೇಲೆ ಅತ್ಯಾಚಾರವೆಸಗಲು (Crime) ಬಲವಂತವಾಗಿ ಬೈಕ್ ನಲ್ಲಿ ಕರೆದೊಯ್ಯುವ ವೇಳೆ ಡಿವೈಡರ್ ಗೆ ಬೈಕ್ ಡಿಕ್ಕಿಯಾಗಿ ಅಪಘಾತ (Bike accident) ಸಂಭವಿಸಿತ್ತು. ಈ ವೇಳೆ ಬಾಲಕಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru rural) ಜಿಲ್ಲೆ ಹೊಸಕೋಟೆ ಪಟ್ಟಣ ನಡೆದಿದೆ.
ಅ.24ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬನ್ನೇರುಘಟ್ಟ ಪೊಲೀಸರು ಆರೋಪಿಗಳನ್ನು ಕೂಡಲೇ ಬಂಧಿಸಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿ ಅಜಯ್ ಬಾಲಕಿಗೆ ಪ್ರೀತಿ ಪ್ರೇಮದ ಹೆಸರಲ್ಲಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಅ.24 ರಂದು ಆಕೆಯನ್ನು ಬಲಂವತವಾಗಿ ಕರೆದೊಯ್ಯುವ ವೇಳೆ ಈ ಘಟನೆ ಸಂಭವಿಸಿದೆ.
ಇದನ್ನೂ ಓದಿ : ಲಗೇಜ್ ಬ್ಯಾಗ್ನಲ್ಲಿ ಕೋಟಿ ಹಣ, ಬಸ್ನಲ್ಲಿ ನಗದು ಸಾಗಿಸುವ ವೇಳೆ ಖದೀಮರು ಲಾಕ್!
ಮನೆತಿಂದ ಹೊರಟು ಶಾಲೆಗೆ ತೆರಳುತ್ತಿದ್ದ ಬಾಲಕಿಯನ್ನು ಅಜಯ್ & ಆತನ ಜೊತೆಗಿದ್ದ ಆರೋಪಿಗಳು ಬಲವಂತವಾಗಿ ಬೈಕ್ ಹತ್ತಿಸಿಕೊಂಡು ಹೊಸಕೋಟೆ ಮಾರ್ಗವಾಗಿ ನಿರ್ಜನ ಪ್ರದೇಶಕ್ಕೆ ತೆರಳುವ ವೇಳೆ ವೇಗದಿಂದ ಬೈಕ್ ಓಡಿಸಿದ್ದಾರೆ. ಈ ವೇಳೆ ಬೈಕ್ ಡಿವೈಡರ್‌ಗೆ ಡಿಕ್ಕಿಯಾಗಿದೆ. ಹೀಗೆ ಡಿಕ್ಕಿಯಾದ ರಭಸಕ್ಕೆ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.