ಒಡಿಶಾ: ಯಾವುದೇ ಸ್ಟಾರ್ ನಟ ಅಥವಾ ತಮ್ಮ ನೆಚ್ಚಿನ ನಟನ ಸಿನಿಮಾ ರಿಲೀಸ್ ಆದಾಗ ಅಭಿಮಾನಿಗಳು ಆ ಸೀಮಾವನ್ನು ಅದ್ದೂರಿಯಾಗಿ ವೆಲ್ಕಮ್ ಮಾಡಿಕೊಳ್ಳೋದು ಸಹಜ. ಆದ್ರೆ ಸಂಭ್ರಮ ಸ್ವಲ್ಪ ಅತಿರೇಕವಾದ್ರೆ ಸೂತಕವಾಗಿ ಮಾರ್ಪಾಡಗಲು ಹೆಚ್ಚು ಸಮಯ ಬೇಕಾಗಲ್ಲ. ಪ್ರಭಾಸ್ (Actor Prabhas) ನಟನೆಯ ದಿ ರಾಜ ಸಾಬ್ (The raja saab) ಸಿನಿಮಾ ಸ್ಕ್ರೀನಿಂಗ್ ವೇಳೆ ಒಡಿಶಾದಲ್ಲಿ (Odisha) ಬೆಂಕಿ ಅವಘಡ ಸಂಭವಿಸಿದೆ.
VIRAL: 'ದಿ ರಾಜಾ ಸಾಬ್..'ಚಿತ್ರಮಂದಿರದಲ್ಲಿ ಭಾರೀ ಯಡವಟ್ಟು!#viralvideo #TheRajaSaab #filmtheatre #fire #firebreaks #talkies #Rayagada #prabhasfans #Odisha #KannadaNews #navasamajanews pic.twitter.com/CfmlUes8uY
— navasamaja (@navasamajanews) January 10, 2026
ಹೌದು, ಜನವರಿ 9 ರಂದು ಹೌದು ನಟ ಡಾರ್ಲಿಂಗ್ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ದಿ ರಾಜಾ ಸಾಬ್’ (The Raja Saab) ದೇಶದಾದ್ಯಂತ ರಿಲೀಸ್ ಆಗಿದೆ..ಈ ಸೀಮಾವನ್ನು ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸಿದ್ದಾರೆ..ಆದ್ರೆ ಒಡಿಶಾದ ರಾಯಗಡದಲ್ಲಿರುವ ಅಶೋಕ್ ಟಾಕೀಸ್‌ನಲ್ಲಿ ದೊಡ್ಡ ಅವಗಡ ವಾಗಿದ್ದು ಪ್ರಭಾಸ್ ಅಭಿಮಾನಿಗಳು ‘ದಿ ರಾಜಾ ಸಾಬ್’ ಗೆಸ್ಕ್ರೀನ್ ಮುಂದೆ ‘ಆರತಿ’ ಎತ್ತಿ ಸಂಭ್ರಮಿಸುತ್ತಿದ್ದಾಗ, ಆರತಿ ತಟ್ಟೆ ಬಿದ್ದು ಬೆಂಕಿ ಹೊತ್ತಿಕೊಂಡಿತು. ತಕ್ಷಣವೇ ಬೆಂಕಿ ಯನ್ನು ಆರಿಸಿದ್ದಾರೆ..ಅಭಿಮಾನಿಗಳ ಹುಚ್ಚಾಟದಿಂದಾಗಿ ಈ ಘಟನೆ ಸಂಭವಿಸಿದೆ.
ಇದನ್ನೂ ಓದಿ : ಜನ ನಾಯಗನ್ ರಿಲೀಸ್‌ಗೆ ತಡೆ ಬೆನ್ನಲ್ಲೇ ನಟ ವಿಜಯ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್
ಹೀಗೆ ಸ್ಕ್ರೀನ್ ಮುಂದೆ ಬೆಂಕಿ ಹೊತ್ತಿಕೊಂಡ ಕೂಡಲೇ ಅದನ್ನು ಆರಿಸಿದ ಪರಿಣಾಮ ಯಾವುದೇ ಅನಾಹುತ ಸಂಭವಿಸಿಲ್ಲ. ಆದೇ ಒಂದುವೇಳೆ ಹೆಚ್ಚು ಕಮ್ಮಿಯಾಗಿದ್ರೆ ದೊಡ್ಡ ಅನಾಹುತವೇ ಸಂಭವಿಸುವ ಸಾಧ್ಯತೆಯಿತ್ತು.ನಟ ಪ್ರಭಾಸ್ ಅಭಿನಯದ ‘ದಿ ರಾಜಾ ಸಾಬ್’ ಹಾರರ್ ಸಿನಿಮಾವಾಗಿದ್ದು ಮೊದಲ ಬಾರಿಗೆ ಪ್ರಭಾಸ್ ಈ ಜನಾರ್ ನಲ್ಲಿ ಸಿನಿಮಾ ಮಾಡಿದ್ದು,ಸಿನಿಮಾ ಬಗ್ಗೆ ಹೋಪ್ಸ್ ಕೂಡ ಹೆಚ್ಚಿದೆ..ಹಾಗೂ ಚಿತ್ರದಲ್ಲಿ ಸಂಜಯ್ ದತ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ..