ಬೆಂಗಳೂರು : ನಗರದ ಹೆಬ್ಬಾಳದಲ್ಲಿರುವ ಕೇಂದ್ರೀಯ ವಿದ್ಯಾಲಯಕ್ಕೆ (Kendriya vidyalaya) ಬಾಂಬ್ ಬೆದರಿಕೆ (Bomb threat) ಇ-ಮೇಲ್ ಸಂದೇಶ ಬಂದಿದೆ. ಕಾಲೇಜಿನಲ್ಲಿ ಮೂರು ಆರ್‌ಡಿಎಕ್ಸ್ (RDX) ಬಾಂಬ್ ಇರಿಸಿರುವುದಾಗಿ ಕೇಂದ್ರೀಯ ವಿದ್ಯಾಲಯದ ಇಮೇಲ್ ಐಡಿ ಗೆ ಇ-ಮೇಲ್ (email) ಸಂದೇಶ ಬಂದಿದೆ. ಇದ್ರಿಂದ ಕಾಲೇಜಿನಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ : ಬಿಜೆಪಿ ಮುಖಂಡನ ಹ*ತ್ಯೆ ಕೇಸ್, ವಿನಯ್ ಕುಲಕರ್ಣಿ ಜಾಮೀನು ಆದೇಶ ಕಾಯ್ದಿರಿಸಿದ ಕೋರ್ಟ್
ಈ ಇ-ಮೇಲ್ ಬಾಂಬ್ ಬೆದರಿಕೆ ಬಗ್ಗೆ ತಿಳಿಯುತ್ತಿದ್ದಂತೆ ಕಾಲೇಜಿನ ಪ್ರಿನ್ಸಿಪಲ್ ಪಿಎಮ್ ಪ್ರಕಾಶ್ ಅವರು ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ಅಲರ್ಟ್ ಆದ ಪೊಲೀಸರು ಕೇಂದ್ರೀಯ ವಿದ್ಯಾಲಯಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಆದ್ರೆ ಸಂಪೂರ್ಣ ಕಟ್ಟಡ ಪರಿಶೀಲನೆ ಬಳಿಕ ಸ್ಥಳದಲ್ಲಿ ಯಾವುದೇ ಆರ್ ಡಿ ಎಕ್ಸ್ ಬಾಂಬ್ ಅಥವಾ ಆತಂಕಕಾರಿ ವಸ್ತು ಪತ್ತೆಯಾಗಿಲ್ಲ ಎನ್ನಲಾಗಿದೆ. ಹೀಗಾಗಿ ಮೇಲ್ನೋಟಕ್ಕೆ ಇದೊಂದು ಹುಸಿ ಬೆದರಿಕೆ ಎಂಬುದು ಸ್ಪಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದು,
ಸದಾಶಿವನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.