ಬಳ್ಳಾರಿ : ಸಂಡೂರಿನ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಕಣ್ಣು ಕಾಣದ ವೃದ್ಧೆಯೋರ್ವರು ಬೂತ್ಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿ ಗಮನ ಸೆಳೆದರು.
ಸಂಡೂರಿನ ತೋರಣಗಲ್ನ ಜನತಾ ಕಾಲೋನಿಯ ಮತಗಟ್ಟೆ ಸಂಖ್ಯೆ 119ಕ್ಕೆ ವ್ಹೀಲ್ ಚೇರ್ನಲ್ಲಿ ಬಂದ ಕಣ್ಣು ಕಾಣದ 70 ವರ್ಷದ ಅಜ್ಜಿ ಶರಣಮ್ಮ ಎಂಬುವವರು ವೋಟ್ ಮಾಡಿ ಇತರರಿಗೂ ಮಾದರಿಯಾದರು.
30ರ ವಯಸ್ಸಿನಲ್ಲೇ ತಮಗೆ ಕಣ್ಣಿನ ದೃಷ್ಟಿ ಹೋಗಿದ್ದು, ಅಲ್ಲಿಂದಲೂ ನಿರಂತರವಾಗಿ ತಾವು ತಪ್ಪದೇ ಮತದಾನ ಮಾಡುತ್ತಿರುವುದಾಗಿ ಹೇಳಿದ್ದಾರೆ. ಈ ಮೂಲಕ ತಪ್ಪದೇ ಎಲ್ಲರೂ ವೋಟ್ ಮಾಡಿ ಎಂದು ಹೇಳಿರುವ ಅವರು ಮತದಾರರಿಗೆ ಮತದಾನದ ಕುರಿತಾದ ಮಹತ್ವ ಸಾರಿ, ಅಜ್ಜಿ ಸ್ಪೂರ್ತಿ ತುಂಬಿದ್ದಾರೆ. ಸಂಡೂರಿನಲ್ಲಿ ಎನ್ಡಿಎ ಅಭ್ಯರ್ಥಿ ಬಂಗಾರಿ ಹನುಮಂತು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರ ನಡುವೆ ಟಫ್ ಪೈಟ್ ಏರ್ಪಟ್ಟಿದೆ.