Monday, June 15, 2026
Homeಟಾಪ್ ನ್ಯೂಸ್CONGRESS: ಉಸ್ತುವಾರಿ ಸಚಿವರ ಮೇಲೆ ಶಾಸಕರ ದೂರಿನ ಸುರಿಮಳೆ..! ಮಂತ್ರಿಗಳಿಗೆ ಸುರ್ಜೇವಾಲಾ ಚಾಟಿ..!

CONGRESS: ಉಸ್ತುವಾರಿ ಸಚಿವರ ಮೇಲೆ ಶಾಸಕರ ದೂರಿನ ಸುರಿಮಳೆ..! ಮಂತ್ರಿಗಳಿಗೆ ಸುರ್ಜೇವಾಲಾ ಚಾಟಿ..!

ಬೆಂಗಳೂರು : ರಾಜ್ಯ ಕಾಂಗ್ರೆಸ್‌ನಲ್ಲಿ ಸಂಘರ್ಷ ತಾರಕಕ್ಕೇರಿದೆ. ಅದರಲ್ಲೂ ಹಿರಿಯ ಶಾಸಕರು ಸ್ವಪಕ್ಷದ ವಿರುದ್ಧವೇ ಆರೋಪಗಳ ಮೇಲೆ ಆರೋಪ ಮಾಡುತ್ತಿದ್ದಾರೆ.ಪದೇ ಪದೇ ಆರೋಪ ಮಾಡುವ ಮೂಲಕ ಸರ್ಕಾರಕ್ಕೆ ಮುಜುಗರ ತರುತ್ತಿದ್ರು.ಆದ್ದರಿಂದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ರಾಜ್ಯಕ್ಕೆ ಭೇಟಿ ನೀಡಿ ಕೈ ಶಾಸಕರ ಜೊತೆಗೆ ಒನ್ ಟು ಒನ್ ಮೀಟಿಂಗ್ ನಡೆಸಿದ್ದಾರೆ.ಸುರ್ಜೇವಾಲಾ ಮುಂದೆ ಅನೇಕ ಶಾಸಕರುಗಳು ಸಚಿವರ ವಿರುದ್ಧ ದೂರು ಸಲ್ಲಿಸಿದ್ದಾರೆ.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ವೇವಾಲ ಮುಂದೆ ಸಚಿವರ ವಿರುದ್ಧ ಶಾಸಕರು ದೂರು ಸಲ್ಲಿಸಿದ್ದಾರೆ. ಕೆಲ ಶಾಸಕರುಗಳು ಯಾವ ಯಾವ ಇಲಾಖೆಯಿಂದ ಅಭಿವೃದ್ಧಿ ಕೆಲಸಕ್ಕೆ ಹಿನ್ನಡೆಯಾಗಿದೆ ಎಂಬುದನ್ನು ದಾಖಲೆ‌ಗಳ ಸಮೇತ ವಿವರಿಸಿದ್ದಾರೆ. ಕೆಲ ಸಚಿವರಿಗೆ ಖುದ್ದು ದೂರವಾಣಿ ಕರೆ ಮಾಡಿರುವ ಸುರ್ಜೇವಾಲ,ಶಾಸಕರ ಮುಂದೆಯೇ ಸಚಿವರಿಗೆ ಕರೆ ಮಾಡಿ ಸಮಸ್ಯೆಯನ್ನ ಗಮನಕ್ಕೆ ತಂದಿದ್ದಾರೆ.

ಸುರ್ಜೇವಾಲ ಸಭೆಯ ಬಳಿಕ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ನಾವು ಮುಕ್ತವಾಗಿ ಸಮಸ್ಯೆ ಹೇಳಿಕೊಂಡಿದ್ದೇವೆ. ಸುರ್ಜೇವಾಲಾ ಒಬ್ಬೊಬ್ಬರಿಗೆ ಅವಕಾಶ ಕೊಟ್ರು,ಅರ್ಧ ಗಂಟೆ, ಮುಕ್ಕಾಲು ಗಂಟೆ ಸಮಸ್ಯೆ ಕೇಳಿದ್ದಾರೆ.

ರಾಜ್ಯ ನಾಯಕರು ಆಲಿಸೋದು ಬೇರೆ.ಆದರೆ ಸುರ್ಜೇವಾಲಾ ಮುಕ್ತ ಅವಕಾಶ ಕೊಟ್ಟಿದ್ದಾರೆ.ಏನು ಬೇಕಾದರೂ ಹೇಳೋಕೆ ಅವಕಾಶ ಇತ್ತು, ನಮ್ಮದೇನಿದೆ ಎಲ್ಲವನ್ನ ಹೇಳಿದ್ದೇನೆ. ಮಂತ್ರಿಗಳ ಬದಲಾವಣೆ ಬಗ್ಗೆ ಕೇಳಿಲ್ಲ, ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಕೇಳಿಲ್ಲ. ಬಹಿರಂಗ ಹೇಳಿಕೆ ಕೊಟ್ರೆ ಕ್ರಮ ಕೈಗೊಳ್ಳಿ ಎಂದಿದ್ದೇನೆ, ನಾನೂ ಕ್ರಮ ತೆಗೆದುಕೊಳ್ಳಿ ಎಂದಿದ್ದೇನೆ ಎಂದರು.

ಹೆಚ್ಚಿನ ಸುದ್ದಿ

Change Language »
error: Content is protected !!