Sunday, January 25, 2026
Homeಕ್ರೈಂCRIME: ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕಿ ಮೇಲೆರಗಿದ ಕಾಮುಕ, ಬೆಚ್ಚಿಬೀಳಿಸುವ ಘಟನೆ- VIDEO

CRIME: ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕಿ ಮೇಲೆರಗಿದ ಕಾಮುಕ, ಬೆಚ್ಚಿಬೀಳಿಸುವ ಘಟನೆ- VIDEO

ತಮಿಳುನಾಡು : ಇಲ್ಲಿನ ತಿರುವಳ್ಳೂರಿನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.ಹತ್ತು ವರ್ಷದ ಅಪ್ರಾಪ್ತ ಬಾಲಕಿ ರಸ್ತೆಯಲ್ಲಿ ಏಕಾಂಗಿಯಾಗಿ ನಡೆದು ಹೋಗುವ ವೇಳೆ,ಆಕೆಯ ಮೇಲೆ ಕಾಮಾಂಧನೊಬ್ಬ ಹಾಡಹಗಲೇ ನಡುರಸ್ತೆಯಿಂದ ಹೊತ್ತೊಯ್ದು ಅತ್ಯಾಚಾರ ಎಸಗಿದ್ದಾನೆ.ಈ ಘಟನೆ ತಿರುವಳ್ಳೂರು ಸಮೀಪದ ಗುಮ್ಮಿಡಿಪೂಂಡಿಯಲ್ಲಿ ನಡೆದಿದ್ದು ಇನ್ನೂ ಆರೋಪಿಯ ಗುರುತು ಪತ್ತೆಯಾಗಿಲ್ಲ.


ಈ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ರಸ್ತೆಯಲ್ಲಿ ಬಹಳ ದೂರದಿಂದ ಬಾಲಕಿಯನ್ನೇ ಹಿಂಬಾಲಿಸಿಕೊಂಡು ಬರುವ ದುರುಳ ರಸ್ತೆಯಲ್ಲಿ ಯಾರೂಇಲ್ಲದ ಸಮಯ ನೋಡಿ ಆಕೆಯನ್ನು ಬಲವಂತವಾಗಿ ರಸ್ತೆ ಪಕ್ಕದ ಪೊದೆಗೆ ಹೊತ್ತೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.ಈ ವಿಡಿಯೋ ನಿಜಕ್ಕೂ ಹೆಣ್ಣುಮಕ್ಕಳು ಎಷ್ಟು ಸೇಫ್ ಎಂಬ ಆತಂಕ ಹುಟ್ಟಿಹಾಕಿದೆ.

ಈ ಬಾಲಕಿ ತಮಿಕುನಾಡಿನ ಆರಂಬಕ್ಕಂ ರೈಲು ನಿಲ್ದಾಣದ ಮೂಲಕ ತನ್ನ ಅಜ್ಜಿಯ ಮನೆಗೆ ಒಬ್ಬಳೇ ಹಾದುಹೋಗುತ್ತಿದ್ದ ಸಂದರ್ಭದಲ್ಲಿ, ಏಕಾಂಗಿಯಾಗಿ ಸಾಗುತ್ತಿದ್ದ ಬಾಲಕಿಯನ್ನು ಕಂಡ ಆರೋಪಿ ಆಕೆಯನ್ನೇ ಹಿಂಬಾಲಿಸಿ ಈ ಕೃತ್ಯವೆಸಗಿದ್ದಾನೆ.ಈ ಘಟನೆ ಜುಲೈ 12 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಈ ಘಟನೆಯಿಂದ ಬಾಲಕಿ ದೈಹಿಕ ಮತ್ತು ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದಾಳೆ.

ಇದಾದ ಬಳಿಕ ಬಾಲಕಿ ಮನೆಗೆ ತೆರಳಿ ನಡೆದ ಘಟನೆಯನ್ನು ತನ್ನ ಅಜ್ಜಿಯ ಬಳಿ ವಿವರಿಸಿದ್ದಾಳೆ.ಈ ಬಗ್ಗೆ ತಿಳಿದ ಕೂಡಲೇ ಮನೆಯವರು ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಈ ವೇಳೆ ಬಾಲಕಿಯ ತಪಾಸಣೆ ನಡೆಸಿದ ವೈದ್ಯರು ಲೈಂಗಿಕ ದೌರ್ಜನ್ಯವನ್ನು ದೃಢಪಡಿಸಿದ್ದಾರೆ.ಸದ್ಯ ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಇನ್ನು ಈ ಘಟನೆಯಿಂದ ಆಘಾತಕ್ಕೊಳಗಾಗಿರುವ ಬಾಲಕಿಯ ಕುಟುಂಬಸ್ಥರು ಅರಂಬಕ್ಕಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಈ ಘಟನೆ ನಡೆದ ರೈಲ್ವೆ ನಿಲ್ದಾಣದ ಸಮೀಪದ ಸಿಸಿಟಿವಿ ಫೂಟೇಜ್ ಗಳನ್ನು ಪೊಲೀಸರು ಪರಿಶೀಲನೆ ನಡೆಸಿದಾಗ ಆರೋಪಿ ಬಾಲಕಿಯನ್ನು ಹೊತ್ತೊಯ್ಯುತ್ತಿರುವ ದೃಶ್ಯ ಸೆರೆಯಾಗಿದೆ. ಈ ವಿಡಿಯೋ ಆಧಾರದ ಮೇಲೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಆರೋಪಿಗಾಗಿ ಬಲೆ ಬೀಸಿದ್ದಾರೆ.

ಕಾಲೇಜು ವಿದ್ಯಾರ್ಥಿನಿಯ ಮೇಲೆ ಉಪನ್ಯಾಸಕರಿಂದಲೇ ಅತ್ಯಾಚಾರ!

ಬೆಂಗಳೂರು/ ಮೂಡಬಿದರೆ : ವಿದ್ಯಾರ್ಥಿನಿಗೆ ಬ್ಲಾಕ್‌ ಮೇಲ್‌ ಇಬ್ಬರು ಉಪನ್ಯಾಸಕರು ಹಾಗೂ ಅವರ ಸ್ನೇಹಿತನೊಬ್ಬ ಸತತವಾಗಿ ಅತ್ಯಾಚಾರವೆಸಗಿರುವ ಘಟನೆ ಮೂಡುಬಿದರೆಯ ಕಾಲೇಜಿನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ವಿದ್ಯಾರ್ಥಿನಿ ದಾಖಲಿಸಿದ ದೂರಿನ ಆಧಾರದ ಮೇಲೆ ಉಪನ್ಯಾಸಕರಾದ ನರೇಂದ್ರ , ಸಂದೀಪ್‌ ಹಾಗೂ ಅವರ ಗೆಳೆಯ ಅನೂಪ್‌ ನನ್ನು ಬಂಧಿಸಲಾಗಿದೆ.

ಭೌತಶಾಸ್ತ್ರ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದ ನರೇಂದ್ರ ವಿದ್ಯಾರ್ಥಿನಿಯೊಂದಿಗೆ ಸಲಿಗೆ ಬೆಳೆಸಿಕೊಂಡಿದ್ದ. ಇದನ್ನೇ ಬಳಸಿಕೊಂಡು ಆಕೆಯನ್ನು ಗೆಳೆಯನ ರೂಮಿಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಬಳಿಕ ಈ ಕೃತ್ಯದ ಫೋಟೋ ಮತ್ತು ವಿಡಿಯೋ ಇರುವುದಾಗಿ ಹೇಳಿ ಜೀವಶಾಸ್ತ್ರದ ಉಪನ್ಯಾಸಕ ಸಂದೀಪ್‌ ಕೂಡ ಸತತವಾಗಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿದ್ದ.

ಇವರಿಬ್ಬರು ಕೃತ್ಯ ನಡೆಸದಿ ಬಳಿಕ ರೂಮ್‌ ಮಾಲಿಕನಾಗಿದ್ದ ಅನೂಪ್‌ , ವಿದ್ಯಾರ್ಥಿನಿಗೆ ಕರೆ ಮಾಡಿ ನೀನು ರೂಮಿಗೆ ಬಂದಿರುವುದು ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದೆ. ಇದನ್ನು ಬಹಿರಂಗ ಪಡಿಸುತ್ತೇನೆಂದು ಬೆದರಿಕೆ ಹಾಕಿ ಅವನೂ ಸಹ ಅತ್ಯಾಚಾರ ನಡೆಸಿದ್ದ.

ಸಮಸ್ಯೆ ಹೆಚ್ಚಾದಾಗ ಪೋಷಕರು ಆಕೆಯನ್ನು ಮನೋವೈದ್ಯರ ಬಳಿ ಕರೆದೊಯ್ದಿದ್ದರು. ಅಲ್ಲಿ ವಿಷಯ ತಿಳಿದಾಗ ಮಹಿಳಾ ಆಯೋಗದ ನೆರವು ಪಡೆದು ದೂರು ದಾಖಲಿಸಿದ್ದರು. ವಿದ್ಯಾರ್ಥಿನಿ ನೀಡಿದ ದೂರನ್ನಾಧರಿಸಿ ಮಾರತ್‌ ಹಳ್ಳಿ ಠಾಣೆಯ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!