Saturday, January 25, 2025
Homeಟಾಪ್ ನ್ಯೂಸ್ಮೊಸಳೆ ದಾಳಿಗೆ ನದಿ ದಾಟುತ್ತಿದ್ದ 8 ಭಕ್ತರ ಬಲಿ!

ಮೊಸಳೆ ದಾಳಿಗೆ ನದಿ ದಾಟುತ್ತಿದ್ದ 8 ಭಕ್ತರ ಬಲಿ!

ಮಧ್ಯಪ್ರದೇಶ: ಚಂಬಲ್ ನದಿ ದಾಟುತ್ತಿದ್ದ ಭಕ್ತರ ಮೇಲೆ ಮೊಸಳೆ ದಾಳಿಯಿಂದಾಗಿ 8 ಮಂದಿ ಭಕ್ತರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಶನಿವಾರ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಚಿಲವಾಡ ಗ್ರಾಮದ ಚಂಬಲ್ ನದಿಯನ್ನು ದಾಟುತ್ತಿದ್ದ ಭಕ್ತರ ಮೇಲೆ ಮೊಸಳೆಯೊಂದು ದಾಳಿ ಮಾಡಿದೆ. ಇದರಿಂದ ಕಂಗಾಲಾದ ಭಕ್ತರು ನದಿ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.

ಚಂಬಲ್ ಕಣಿವೆಯಲ್ಲಿ ಮೃತದೇಹಗಳಿಗಾಗಿ ನಡೆಯುತ್ತಿರುವ ಶೋಧಕಾರ್ಯ

ಭಕ್ತರು ರಾಜಸ್ಥಾನದ ಕೈಲಾ ದೇವಿ ದೇವಸ್ಥಾನದ ಕಡೆಗೆ ಹೋಗುತ್ತಿದ್ದರು. ಪೋಲೀಸರ ಪ್ರಕಾರ, ನದಿ ದಾಟುವ ವೇಳೆ ಭಕ್ತರ ಗುಂಪಿನ ಮೇಲೆ ಮೊಸಳೆ ದಾಳಿ ಮಾಡಿದ್ದರ ಪರಿಣಾಮ ನದಿ ಪ್ರವಾಹದ ರಭಸಕ್ಕೆ ಭಕ್ತರು ನೀರುಪಾಲಾಗಿದ್ದಾರೆ.

ದಾಟಲು ಸೇತುವೆಯಾಗಲಿ.., ದೋಣಿಯಾಗಲಿ ಇಲ್ಲದ ಸ್ಥಳದಲ್ಲಿ ಪರಸ್ಪರ ಕೈಹಿಡಿದು ಭಕ್ತರು ನದಿ ದಾಟುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎನ್ನುತ್ತಾರೆ ಪ್ರತ್ಯಕ್ಷ ದರ್ಶಿ. ನದಿಯ ಪ್ರವಾಹ ನೋಡಿದ್ರೆ ಯಾರೊಬ್ಬರೂ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದ್ದು, ಒಟ್ಟು ೮ ಮಂದಿಯಲ್ಲಿ ೩ ಮೃತ ದೇಹಗಳು ಪತ್ತೆಯಾಗಿದೆ.ಉಳಿದ ಮೃತದೇಹಗಳಿಗಾಗಿ ಶೋಧಕಾರ್ಯ ಮುಂದುವರೆದಿದೆ.

ಹೆಚ್ಚಿನ ಸುದ್ದಿ

error: Content is protected !!