ಅಹ್ಮದಾಬಾದ್: ಗುಜರಾತ್ ನ ಅಹ್ಮದಾಬಾದ್ ನ ವಿವಿಧೆಡೆ ‘ಮೋದಿ ಹಠಾವೋ, ದೇಶ್ ಬಚಾವೊ’ ಪೋಸ್ಟರ್ ಅಂಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ 8 ಜನರನ್ನು ಬಂಧಿಸಲಾಗಿದೆ.
ಆಮ್ ಆದ್ಮಿ ಪಕ್ಷವು ಪ್ರಧಾನಿ ಮೋದಿ ವಿರುದ್ಧ ದೇಶಾದ್ಯಂತ ಪೋಸ್ಟರ್ ಅಭಿಯಾನ ಆರಂಭಿಸಿದ ನಂತರ ಈ ಬಂಧನ ಬೆಳವಣಿಗೆ ನಡೆದಿದೆ.
ಈಗಾಗಲೇ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಹ್ಮದಾಬಾದ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧನಕ್ಕೊಳಗಾದವರು ನಮ್ಮ ಕಾರ್ಯಕರ್ತರು ಎಂದು ಆಮ್ ಆದ್ಮಿ ಮುಖಂಡ ಇಸುದಾನ್ ಗದ್ವಿ ಹೇಳಿದ್ದು, ಬಿಜೆಪಿ ಸರ್ವಾಧಿಕಾರದ ವರ್ತನೆ ತೋರುತ್ತಿದೆ ಎಂದಿದ್ದಾರೆ.