Monday, April 21, 2025
Homeಟಾಪ್ ನ್ಯೂಸ್REPUBLIC DAY : 76ನೇ ಗಣರಾಜ್ಯೋತ್ಸವ - ಆಕರ್ಷಕ ಪಥಸಂಚಲದಲ್ಲಿ ಮಿಂಚಿದ ಸ್ತಬ್ಧ ಚಿತ್ರ -...

REPUBLIC DAY : 76ನೇ ಗಣರಾಜ್ಯೋತ್ಸವ – ಆಕರ್ಷಕ ಪಥಸಂಚಲದಲ್ಲಿ ಮಿಂಚಿದ ಸ್ತಬ್ಧ ಚಿತ್ರ – VIDEO 

ನವದೆಹಲಿ : 76 ನೇ ಗಣರಾಜ್ಯೋತ್ಸವದ ಹಿನ್ನಲೆ ದೆಹಲಿಯ ಕರ್ತವ್ಯ ಪಥ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿದ್ದು, ಆಕರ್ಷಕ ಪಥಸಂಚಲನ ಆರಂಭವಾಗಿದೆ.

ಎಂದಿನಂತೆ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಸುವರ್ಣ ಭಾರತ ಪರಂಪರೆ ಮತ್ತು ಪ್ರಗತಿ ಥೀಮ್​​ ಅಡಿಯಲ್ಲಿ ಗೋವಾದ ಟ್ಯಾಬ್ಲೋ, ರಾಜ್ಯದ ಪ್ರಾಚೀನ ಕಡಲತೀರಗಳು, ಹಚ್ಚ ಹಸಿರಿನ ಭೂದೃಶ್ಯಗಳು ಮತ್ತು ಶ್ರೀಮಂತ ಸಂಸ್ಕೃತಿ ಟ್ಯಾಬ್ಲೋ ಕರ್ತವ್ಯ ಪಥನಲ್ಲಿ ಸಾಗಿತು.

ಲೆಫ್ಟಿನೆಂಟ್ ಅಹಾನ್ ಕುಮಾರ್ ನೇತೃತ್ವದ 61 ಅಶ್ವಸೈನ್ಯದ ಮೊದಲ ಸೇನಾ ತುಕಡಿಯು ಗಣರಾಜ್ಯೋತ್ಸವ ಪರೇಡ್ ಅನ್ನು ಮುನ್ನಡೆಸಿತು. 1953 ರಲ್ಲಿ ಆರಂಭಗೊಂಡ 61 ಅಶ್ವಸೈನ್ಯವು ವಿಶ್ವದಲ್ಲಿ ಏಕೈಕ ಸೇವೆ ಸಲ್ಲಿಸುತ್ತಿರುವ ಹಾರ್ಸ್ಟ್ ಕ್ಯಾವಲ್ಲಿ ರೆಜಿಮೆಂಟ್ ಎನ್ನುವ ವಿಶೇಷತೆ ಹೊಂದಿದೆ. 

ಇನ್ನು ನಾರಿ ಶಕ್ತಿ ಅನ್ನು ಪ್ರತಿನಿಧಿಸುವ ಎಲ್ಲಾ ಮೂರು ಪಡೆಗಳ ಅನುಭವಿ ಮಹಿಳಾ ಅಧಿಕಾರಿಗಳಾದ ಲೆಫ್ಟಿನೆಂಟ್ ಕರ್ನಲ್ ರವೀಂದ್ರಜೀತ್ ರಾಂಧವಾ, ಲೆಫ್ಟಿನೆಂಟ್ ಕಮಾಂಡ‌ರ್ ಮಣಿ ಅಗರ್ವಾಲ್ ಮತ್ತು ಫೈಟ್ ಲೆಫ್ಟಿನೆಂಟ್ ರುಚಿ ಸಹಾ, ಸಶಸ್ತ್ರ ಪಡೆಗಳನ್ನು ರೂಪಿಸುವಲ್ಲಿ ಮಹಿಳೆಯರ ಪ್ರಮುಖ ಪಾತ್ರವನ್ನು ಪ್ರದರ್ಶಿಸಿದರು.

ಕರ್ತವ್ಯ ಪಥದಲ್ಲಿ ಸಾಗುವ ತುಕಡಿಗಳಲ್ಲಿ ಸಹಾಯಕ ಕಮಾಂಡೆಂಟ್ ಐಶ್ವರ್ಯಾ ಜಾಯ್ ಎಂ ನೇತೃತ್ವದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ನ 148 ಸದಸ್ಯರ ಸಂಪೂರ್ಣ ಮಹಿಳಾ ಮೆರವಣಿಗೆಯ ತುಕಡಿಯೂ ನಾರಿ ಶಕ್ತಿಯ ಸಂಕೇತದಂತಿತ್ತು.

ಇನ್ನು ಪಥಸಂಚಲನದಲ್ಲಿ 300 ಸಾಂಸ್ಕೃತಿಕ ಕಲಾವಿದರು ದೇಶದ ವಿವಿಧ ಭಾಗಗಳಿಂದ ಬಂದ ಸಂಗೀತ ವಾದ್ಯಗಳೊಂದಿಗೆ ಸಾರೆ ಜಹಾನ್ ಸೆ ಅಚ್ಛಾ ನುಡಿಸುವ ಮೂಲಕ ಮೆರವಣಿಗೆಗೆ ಚಾಲನೆ ದೊರಕಿತು. 

 

ವಾದ್ಯಗಳ ಮೇಳವು ಶೆಹನಾಯಿ, ಸುಂದರಿ, ನಾದಸ್ವರಂ, ಬೀನ್, ಮಶಕ್ ಬೀನ್, ರಣಸಿಂಗ – ರಾಜಸ್ಥಾನ, ಕೊಳಲು, ಕರ್ನಾಟಕದ ಕರಡಿ ಮಜಲು, ಮೊಹೂರಿ, ಸಂಖ, ತುಟಾರಿ, ಧೋಲ್, ಗಾಂಗ್, ನಿಶಾನ್, ಚಾಂಗ್, ತಾಶಾ, ಸಾಂಬಲ್, ಚೆಂಡ, ಇಡಕ್ಕಾ, ಲೆಜಿಮ್, ಲೆಜಿಮ್, ಗುಡುಮ್ ಬಾಜಾ, ತಾಳಮ್ ಮತ್ತು ಮೊನ್ಸಾಹ್ ವಿಶೇಷವಾಗಿದ್ದವು. ಇಡೀ ಭಾರತದ ಕಲೆ ಹಾಗೂ ಸಂಸ್ಕೃತಿ ಒಳಗೊಂಡಿತ್ತು.

ಪರೇಡ್‌ನಲ್ಲಿ ಬಿಎಸ್‌ಎಫ್ ಮತ್ತು ಎನ್‌ಸಿಸಿ ಕಾಂಟಿಜೆಂಟ್‌ನ ಕ್ಯಾಮೆಲ್ ಮೌಂಟೆಡ್ ಬ್ಯಾಂಡ್ ನಂತರ ಬಿಎಸ್‌ಎಫ್‌ನ ಒಂಟೆ ತುಕಡಿ ಎಲ್ಲರ ಗಮನ ಸೆಳೆಯಿತು. ಸಿಖ್ ಲಿ ರೆಗ್ಟ್ ಸೆಂಟರ್, ಬಿಹಾರ ರೆಗ್ಟ್ ಸೆಂಟರ್ ಮತ್ತು ಲಡಾಖ್ ಸ್ಕೌಟ್ಸ್ ರೆಗ್ಟ್ ಸೆಂಟರ್‌ನ ಸಂಯೋಜಿತ ಬ್ಯಾಂಡ್, ನಂತರದ ಮಹಾರ್ ರೆಜಿಮೆಂಟ್, ನಂತರ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ ರೆಜಿಮೆಂಟ್ ಪಥಸಂಚಲನ ನಡೆಸಿತು.

ಹೆಚ್ಚಿನ ಸುದ್ದಿ

error: Content is protected !!