Saturday, January 25, 2025
Homeಟಾಪ್ ನ್ಯೂಸ್651 ಅಗತ್ಯ ಔಷಧಿಗಳ ಬೆಲೆ ಕಡಿಮೆಗೊಳಿಸಿದ ಕೇಂದ್ರ

651 ಅಗತ್ಯ ಔಷಧಿಗಳ ಬೆಲೆ ಕಡಿಮೆಗೊಳಿಸಿದ ಕೇಂದ್ರ

ನವದೆಹಲಿ: ಬಹುತೇಕ ಅನುಸೂಚಿತ ಔಷಧಿಗಳ (ಶೆಡೂಲ್ಡ್‌ ಡ್ರಗ್ಸ್) ಗರಿಷ್ಠ ದರಗಳನ್ನು ಕೇಂದ್ರ ಸರ್ಕಾರ ಮಿತಿ ನಿಗದಿಪಡಿಸಿದ್ದು, 651 ಅಗತ್ಯ ಔಷಧಿಗಳ ದರಗಳು ಸರಾಸರಿ ಶೇ 6.73ರಷ್ಟು ಕಡಿಮೆಯಾಗಿವೆ.

ಈ ಕುರಿತು ರಾಷ್ಟ್ರೀಯ ಔಷಧಿಗಳ ದರ ನಿಗದಿ ಪ್ರಾಧಿಕಾರ (ಎನ್‌ಪಿಪಿಎ) ಟ್ವೀಟ್‌ ಮಾಡಿದ್ದು, ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯಲ್ಲಿರುವ (ಎನ್‌ಎಲ್‌ಇಎಂ) 870 ಅನುಸೂಚಿತ ಔಷಧಿಗಳ ಪೈಕಿ, ಈ ವರೆಗೆ 651 ಔಷಧಿಗಳ ಗರಿಷ್ಠ ದರಗಳ ಮೇಲೆ ಮಿತಿ ಹೇರಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಕೇಂದ್ರ ಆರೋಗ್ಯ ಸಚಿವಾಲಯ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಎನ್‌ಎಲ್‌ಇಎಂ ಅನ್ನು ತಿದ್ದುಪಡಿ ಮಾಡಿತ್ತು. 651 ಅಗತ್ಯ ಔಷಧಿಗಳ ದರ ಶೇ.12.12ರಷ್ಟು ಹೆಚ್ಚಳವಾಗಬೇಕಿತ್ತು. ಆದರೆ, ಕೇಂದ್ರ ಸರ್ಕಾರ ದರ ಹೆಚ್ಚಳಕ್ಕೆ ಸಂಬಂಧಿಸಿ ಮಿತಿ ಹೇರಿದ್ದರಿಂದಾಗಿ ಅವುಗಳ ದರಗಳು ಏಪ್ರಿಲ್‌ 1 ರಿಂದ ಶೇ.6.73ರಷ್ಟು ಕಡಿಮೆಯಾಗಿವೆ ಎಂದು ತಿಳಿಸಿದೆ.

ಸಗಟು ದರ ಸೂಚ್ಯಂಕದ (ಡಬ್ಲ್ಯುಪಿಐ) ಆಧಾರದ ಮೇಲೆ ಔಷಧಿಗಳ ದರಗಳಲ್ಲಿ ವಾರ್ಷಿಕ ಶೇ.12.12ರಷ್ಟು ಹೆಚ್ಚಳವಾಗಬೇಕಿತ್ತು. ಆದರೆ, ದರಗಳಲ್ಲಿನ ಈ ಕಡಿತದಿಂದಾಗಿ ಗ್ರಾಹಕರಿಗೆ ಲಾಭವಾಗಲಿದೆ ಎಂದು ಹೇಳಿದೆ.

ಹೆಚ್ಚಿನ ಸುದ್ದಿ

error: Content is protected !!