ಕೋಲ್ಕತ್ತಾ: ಸತತ ಎರಡು ವರ್ಷಗಳಿಂದ ತಮ್ಮ ಮನೆಯ ನಾಯಿಯ ಮೇಲೆ ಅತ್ಯಾಚಾರ ಎಸಗಿದ 60 ವರ್ಷದ ವೃದ್ಧರೋಬ್ಬರನ್ನು ಬಂಧಿಸಲಾಗಿದೆ.
ಪಶ್ಚಿಮ ಬಂಗಾಳದ ದಕ್ಷಿಣ ಭಾಗದಲ್ಲಿರುವ 24 ಪರಗಣಾಸ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವೃದ್ಧರೊಬ್ಬರು ಸತತ ಎರಡು ವರ್ಷಗಳ ಕಾಲ ನಾಯಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದು ಬಂದಿದೆ.
ವ್ಯಕ್ತಿಯು ನಾಯಿ ಮೇಲೆ ಅತ್ಯಾಚಾರ ಎಸಗುತ್ತಿರುವುದರ ವಿಡಿಯೋವನ್ನು ನೆರೆಹೊರೆಯವರು ರೆಕಾರ್ಡ್ ಮಾಡಿ ಪ್ರಾಣಿ ರಕ್ಷಣಾ ಸಂಘಟನೆಗೆ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೇ ಈ ವೃದ್ಧ ಬೀದಿ ನಾಯಿಗಳ ಮೇಲೂ ಅತ್ಯಾಚಾರ ಎಸಗಿದ್ದರು ಎಂದು ಗೊತ್ತಾಗಿದೆ.
ಈ ಕುರಿತಾಗಿ ಮಾಹಿತಿ ನೀಡಿದ ಪ್ರಾಣಿ ರಕ್ಷಣಾ ಸಂಘಟನೆಯ ಸ್ಥಾಪಕರಾದ ಸಂದೀಪನ್ ಮುಖರ್ಜಿ ಅವರು, ನೆರೆಹೊರೆಯವರು ನೀಡಿದ ವಿಡಿಯೋ ಆಧಾರದ ಮೇಲೆ ನಮ್ಮ ಸಂಘಟನೆಯು ವ್ಯಕ್ತಿಯ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಹೇಳಿದರು.