ಸಿಕ್ಕಿಂ: ಸಿಕ್ಕಿಂನಲ್ಲಿ ಹಿಮಪಾತ ಆರು ಮಂದಿ ಪ್ರವಾಸಿಗರನ್ನು ಬಲಿ ಪಡೆದಿದೆ. ಭಾರೀ ಹಿಮಕುಸಿತದ ಪರಿಣಾಮ ಹಿಮದ ಅಡಿಯಲ್ಲಿ 80 ಕ್ಕೂ ಹೆಚ್ಚು ಜನ ಸಿಲುಕಿರುವ ಶಂಕೆ ಇದೆ.
ನಾಥುಲಾ ಪಾಸ್ ಮೂಲಕ ಗ್ಯಾಂಗ್ಟಾಕ್ ಗೆ ಸಂಪರ್ಕ ಕಲ್ಪಿಸುವ ಜವಾಹರ್‌ಲಾಲ್ ನೆಹರು ರಸ್ತೆಯುದ್ದಕ್ಕೂ ಹಿಮಪಾತವಾಗಿದ್ದು ಒಂದು ಮಗು ಸೇರಿದಂತೆ ಆರು ಮಂದಿ ಪ್ರವಾಸಿಗರು ಮೃತರಾಗಿದ್ದು, 11 ಜನರು ಗಾಯಗೊಂಡಿದ್ದಾರೆ. ಹಿಮದಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ.