ನವದೆಹಲಿ : 2024 ರಲ್ಲಿ ಭಾರತದಲ್ಲಿ ರೇಬೀಸ್‌ನಿಂದ 54 ಮಂದಿ ಸಾವನ್ನಪಿದ್ದಾರೆ ಎಂಬ ವರದಿ ಆತಂಕಕ್ಕೆ ಕಾರಣವಾಗಿದೆ. ಈ ವರದಿಯ ಪ್ರಕಾರವಾಗಿ ಪ್ರತಿ ತಿಂಗಳಿಗೆ ಸರಾಸರಿ ನಾಲ್ಕು ಸಾವುಗಳು ದೇಶದಲ್ಲಿ ಸಂಭವಿಸಿವೆ.
ಇದೊಂದು ವೈರಸ್ ಆಗಿದ್ದು, ಸಾಮಾನ್ಯವಾಗಿ ಸಾಕು ಪ್ರಾಣಿಗಳು ಪ್ರಮುಖವಾಗಿ ನಾಯಿಗಳಿಂದ ಮನುಷ್ಯರಿಗೆ ಹರಡುತ್ತದೆ.ಈ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, 2022 ರಿಂದ 2024ಕ್ಕೆ 2.57 ಪಟ್ಟು ಹೆಚ್ಚಾಗಿದೆ. ಇದರ ಜೊತೆಗೆ 21 ಜನರು ವೈರಲ್ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಮಹಾರಾಷ್ಟ್ರದಲ್ಲಿ ರೇಬಿಸ್ ನಿಂದಾಗಿ ಕಳೆದ ವರ್ಷ
14 ಸಾವುಗಳು ವರದಿಯಾಗಿದ್ದು ಆ ಮೂಲಕ ದೇಶದಲ್ಲಿ ಅತಿ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗಿದ್ದು, ಇನ್ನುಳಿದಂತೆ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ರೇಬಿಸ್‌ನಿಂದಾಗಿ ತಲಾ ಆರು ಸಾವುಗಳು ದಾಖಲಾಗಿವೆ.