ಇಂದೋರ್: ರಾಮನವಮಿ ಆಚರಣೆ ವೇಳೆ ಉಂಟಾದ ನೂಕುನುಗ್ಗಲಿನಿಂದಾಗಿ 25ಕ್ಕೂ ಹೆಚ್ಚು ಜನರು ಬಾವಿಯೊಳಗೆ ಬಿದ್ದಿರುವ ಘಟನೆ ಇಂದೋರ್ ನ ಶ್ರೀ ಬೇಲೇಶ್ವರ ಮಹಾದೇವ ಜೂಲೇಲಾಲ್ ದೇವಸ್ಥಾನದಲ್ಲಿ ನಡೆದಿದೆ.
ರಾಮನವಮಿ ಹಿನ್ನೆಲೆಯಲ್ಲಿ ನೂಕುನುಗ್ಗಲಿನ ಕಾರಣ ದೇವಸ್ಥಾನದ ಛಾವಣಿ ಕುಸಿದು 25ಕ್ಕೂ ಹೆಚ್ಚು ಮಂದಿ ಬಾವಿಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಬಾವಿಯೊಳಗೆ ಬಿದ್ದಿರುವವರನ್ನು ರಕ್ಷಿಸಲು ಕಾರ್ಯಾಚರಣೆ ಈಗಾಗಲೇ ಆರಂಭವಾಗಿದೆ. ಹಲವು ಜನರಿದ್ದ ಗುಂಪು ಪುರಾತನ ಬಾವಿಯ ಮೇಲೆ ನಿಂತಿತ್ತು. ಭಾರ ತಡೆಯಲಾರದೆ ಛಾವಣಿ ಕುಸಿದಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.