ಲಕ್ನೋ: ನಾಪತ್ತೆಯಾಗಿದ್ದ ಎರಡು ವರ್ಷದ ಬಾಲಕಿಯ ಮೃತದೇಹ ನೆರೆಮನೆಯ ಬಾಗಿಲಿಗೆ ನೇತು ಹಾಕಿದ್ದ ಬ್ಯಾಗೊಂದರಲ್ಲಿ ಪತ್ತೆಯಾದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ನೆರೆಮನೆಯ ವ್ಯಕ್ತಿ ಈ ಕೃತ್ಯದ ಹಿಂದಿದ್ದಾನೆ ಎಂದು ಶಂಕಿಸಲಾಗಿದ್ದು, ಆತ ನಾಪತ್ತೆಯಾಗಿದ್ದಾನೆ.
ಇಲ್ಲಿನ ದೇವಲಾ ಗ್ರಾಮದಲ್ಲಿ ಇರುವಂತಹ ಬಾಡಿಗೆ ಮನೆ ಯೊಂದರಲ್ಲಿ ಬಾಲಕಿಯ ಕುಟುಂಬ ವಾಸಿಸುತ್ತಿದ್ದು, ಎರಡು ದಿನಗಳಿಂದ ಬಾಲಕಿ ನಾಪತ್ತೆಯಾಗಿದ್ದಳು. ಆನಂತರ ಎರಡು ದಿನಗಳಾದ ಮೇಲೆ ಬಾಲಕಿಯ ಮೃತದೇಹ ಬ್ಯಾಗ್ ನಲ್ಲಿ ಪತ್ತೆಯಾಗಿದೆ
ಪುತ್ರಿ ಕಾಣೆಯಾಗಿದ್ದರ ಬಗ್ಗೆ ಏಪ್ರಿಲ್ 8ರಂದು ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದರು. ನಾನು ಕೆಲಸಕ್ಕೆ ಹೋಗಿದ್ದೆ. ನನ್ನ ಪತ್ನಿ ಮಾರುಕಟ್ಟೆಗೆ ಹೋಗಿ ಹಿಂದಿರುಗಿ ಬಂದಾಗ ಮನೆಯಲ್ಲಿ ಪುತ್ರಿ ಇರಲಿಲ್ಲ. ಆಕೆ ನಾಪತ್ತೆಯಾಗಿದ್ದಳು ಎಂದಿ ದೂರಿದ್ದರು.
ಆದರೆ ರವಿವಾರದಂದು ನೆರೆಮನೆಯಿಂದ ಕೆಟ್ಟ ವಾಸನೆ ಬರುತ್ತಿರುವ ಬಗ್ಗೆ ಮಾಹಿತಿ ಸಿಕ್ಕ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಫೊರೆನ್ಸಿಕ್ ತಂಡ ಪರಿಶೀಲನೆ ನಡೆಸಿದಾಗ ಇದು ಬಾಲಕಿಯ ಮೃತದೇಹ ಎನ್ನುವುದು ತಿಳಿದುಬಂದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಆರೋಪಿಗಾಗಿ ಶೋಧ ನಡೆದಿದೆ.
.