ನವದೆಹಲಿ : ಗಣರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಶೌರ್ಯ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳ ವಿತರಣೆಗೆ ರಾಷ್ಟ್ರಪತಿ ದೌಪದಿ ಮುರ್ಮು ಅನುಮೋದನೆ ನೀಡಿದ್ದಾರೆ.ಇದರಲ್ಲಿ 11 ಮರಣೋತ್ತರ ಸೇರಿದಂತೆ 93 ಸಶಸ್ತ್ರ ಪಡೆಗಳು ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿಗೆ ಪ್ರಶಸ್ತಿ ವಿತರಿಸಲಾಗುವುದು.
ಒಂದು ಮರಣೋತ್ತರ,ಎರಡು ಕೀರ್ತಿ ಚಕ್ರ ಪ್ರಶಸ್ತಿ ಒಳಗೊಂಡಂತೆ ಒಟ್ಟು 14 ಶೌರ್ಯ ಚಕ್ರಗಳು, ಜೊತೆಗೆ ಒಂದು ಬಾರ್ ಟು ಸೇನಾ ಪದಕ, ಜೊತೆಗೆ ಏಳು ಮರಣೋತ್ತರ ಪ್ರಶಸ್ತಿ ಸೇರಿದಂತೆ 66 ಸೇನಾ ಪದಕಗಳು ಹಾಗೂ ಎರಡು ನವಸೇನಾ ಪದಕ ಮತ್ತು ಎಂಟು ವಾಯುಸೇನಾ ಪದಕಗಳನ್ನು ನೀಡಲಾಗುವುದು.
ಇನ್ನುಳಿದಂತೆ 30 ಪರಮ ವಿಶಿಷ್ಟ ಸೇವಾ ಪದಕಗಳು, ಐದು ಉತ್ತಮ ಯುದ್ಧ ಸೇವಾ ಪದಕಗಳು, 57 ಅತಿ ವಿಶಿಷ್ಟ ಸೇವಾ ಪದಕಗಳು, 10 ಯುದ್ಧ ಸೇವಾ ಪದಕಗಳು ಸೇರಿವೆ. ಸೇನಾ ಪದಕಗಳಿಗೆ ಕರ್ತವ್ಯ ನಿಷ್ಠೆ, 43 ಸೇನಾ ಪದಕಗಳು, ಎಂಟು ನಾವೋ ಸೇನಾ ಪದಕಗಳು 15 ವಾಯುಸೇನಾ ಪದಕಗಳು ನಾಲ್ಕು ಬಾರ್ ಟು ವಿಶಿಷ್ಟ ಸೇವಾ ಪದಕ ಮತ್ತು 132 ವಿಶಿಷ್ಟ ಸೇವಾ ಪದಕಗಳು ಒಳಗೊಂಡಿವೆ.