ನವದೆಹಲಿ: ಆಂಧ್ರಪ್ರದೇಶದ ವಕಪಲ್ಲಿಯಲ್ಲಿ 11 ಬುಡಕಟ್ಟು ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ 13 ಪೊಲೀಸರನ್ನು ಕೋರ್ಟ್ ಖುಲಾಸೆಗೊಳಿಸಿದೆ.
ಆದರೆ ಈ ಆದೇಶ ನಮ್ಮ ಮೇಲಿನ ದಾಳಿ. ವ್ಯವಸ್ಥೆಯು ಅಧಿಕಾರದಲ್ಲಿರುವವರನ್ನು ರಕ್ಷಿಸಿದೆ ಎಂದು ಮಹಿಳೆಯರು ಆರೋಪಿಸಿದ್ದಾರೆ.
ಒಬ್ಬ ಪೊಲೀಸ್ ಮತ್ತೊಬ್ಬ ಪೊಲೀಸ್ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸುವುದಿಲ್ಲ. ಸಮಾಧಾನದ ವಿಷಯವೆಂದರೆ ಕೋರ್ಟ್ ನಮಗೆ ಪರಿಹಾರದ ನೀಡಬೇಕು ಎಂದು ಹೇಳಿದೆ. ಇದರ ಅರ್ಥ ನಾವು ಸಂತ್ರಸ್ತರು ಎನ್ನುವುದು ಎಂದು ಒಬ್ಬ ಮಹಿಳೆ ಹೇಳಿದ್ದಾರೆ.
2007ರ ಆಗಸ್ಟ್ 20ರಂದು 30 ಜನರಿದ್ದ ಪೊಲೀಸರ ತಂಡ ಮಾವೋವಾದಿ ವಿರುದ್ಧದ ಕೂಂಬಿಂಗ್ ಕಾರ್ಯಾಚರಣೆ ನಡೆಸಿತ್ತು. ಈ ಸಂದರ್ಭ ಹದಿಮೂರು ಪೊಲೀಸರು ಗನ್ ಪಾಯಿಂಟ್ ನಲ್ಲಿ ನಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು 11 ಮಹಿಳೆಯರು ಆರೋಪಿಸಿದ್ದರು.