Sunday, November 10, 2024
Homeಟಾಪ್ ನ್ಯೂಸ್KAMALA HARIS : ಕಮಲಾ ಹ್ಯಾರಿಸ್‌ ಗೆಲುವಿಗಾಗಿ ಭಾರತದಲ್ಲಿ ವಿಶೇಷ ಪೂಜೆ - 11 ದಿನಗಳ...

KAMALA HARIS : ಕಮಲಾ ಹ್ಯಾರಿಸ್‌ ಗೆಲುವಿಗಾಗಿ ಭಾರತದಲ್ಲಿ ವಿಶೇಷ ಪೂಜೆ – 11 ದಿನಗಳ ಮಹಾ ಯಜ್ಞ ಇಂದಿಗೆ ಅಂತ್ಯ !

ತೆಲಂಗಾಣ: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಗೆಲುವಿಗಾಗಿ ತೆಲಂಗಾಣದ ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಪಲ್ವಂಚದಲ್ಲಿರುವ ಶ್ಯಾಮಲಾ ಗೋಪಾಲನ್ ಎಜುಕೇಶನಲ್ ಫೌಂಡೇಶನ್ ಪ್ರಧಾನ ಕಚೇರಿಯಲ್ಲಿ 11 ದಿನಗಳ ಕಾಲ ನಡೆದ ಮಹಾ ಯಜ್ಞ ಇಂದು ಮುಕ್ತಾಯಗೊಂಡಿದೆ.

ಡಾ. ಶ್ಯಾಮಲಾ ಗೋಪಾಲನ್ ಬಯೋಮೆಡಿಕಲ್ ವಿಜ್ಞಾನಿ ಮತ್ತು ಕಮಲಾ ಹ್ಯಾರಿಸ್ ಅವರ ತಾಯಿಯಾಗಿದ್ದರೆ. ಕಮಲಾ ಹ್ಯಾರಿಸ್ ಮೂಲತಃ ಭಾರತದವರಾಗಿದ್ದು, ಈಗಾಗಲೇ ಅಮೆರಿಕದ ಉಪಾಧ್ಯಕ್ಷೆ ಪಟ್ಟವನ್ನ ಅಲಂಕರಿಸಿದ್ದಾರೆ. ಆದ್ರೆ ಈ ಬಾರಿಯ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಗೆದ್ದುಬರಲಿ ಎಂದು ಈ ಪೂಜೆ ನೆರವೇರಿಸಲಾಗಿದೆ.

ಈ ಬಾರಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ತೀವ್ರ ಜಟಾಪಟಿಯಿಂದ ಕೂಡಿರಲಿದ್ದು, ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ನಡುವಿನ ರಾಜಕೀಯ ಯುದ್ಧದ್ದಲಿ ಕಮಲಾ ಹ್ಯಾರಿಸ್ ಗೆದ್ದು ಅಮೆರಿಕಾ ಅಧ್ಯಕ್ಷೆಯಾಗಬೇಕು ಎಂಬುದು ಹಲವು ಭಾರತೀಯರ ಬಯಕೆಯಾಗಿದೆ.

ಹೆಚ್ಚಿನ ಸುದ್ದಿ

error: Content is protected !!