ಬೆಂಗಳೂರು: ಮೊದಲ ಹಂತದಲ್ಲಿ 124 ಹಾಗೂ ಎರಡನೇ ಹಂತದಲ್ಲಿ 42 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್ ಮೂರನೇ ಪಟ್ಟಿಯಲ್ಲಿ ಯುವಕರಿಗೆ ಆದ್ಯತೆ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ರು
ಇಂದು ದೆಹಲಿಯಿಂದ ಆಗಮಿಸಿದ ಡಿ.ಕೆ ಶಿವಕುಮಾರ್, ಈಗಾಗಲೇ ನಾವು ಎರಡು ಪಟ್ಟಿ ರಿಲೀಸ್ ಮಾಡಿದ್ದೇವೆ. ಇನ್ನೊಂದು ಪಟ್ಟಿ ಬಿಡುಗಡೆ ಬಾಕಿಯಿದ್ದು, ಉಳಿದ ಕ್ಷೇತ್ರಗಳಲ್ಲಿ ಯುವಕರಿಗೆ ಅವಕಾಶ ನೀಡೋದಾಗಿ ಹೇಳಿದ್ರು. ನಾವಾದರೂ ಈಗಾಗಲೇ 2 ಪಟ್ಟಿ ರಿಲೀಸ್ ಮಾಡಿದ್ದೇವೆ. ಆದ್ರೆ ಪಾಪ ಬಿಜೆಪಿಯವರು ಇನ್ನೂ ಅಭ್ಯರ್ಥಿಗಳನ್ನು ಹುಡುಕೋದ್ರಲ್ಲೇ ಇದ್ದಾರೆ ಎಂದು ಡಿ.ಕೆ ಶಿ ಬಿಜೆಪಿಯ ಕಾಲೆಳೆದ್ರು
ಇನ್ನು ಟಿಕೆಟ್ ಆಕಾಂಕ್ಷಿಗಳ ಅಸಮಾಧಾನದ ಕುರಿತು ಪ್ರತಿಕ್ರಿಯಿಸಿ, ಶೀಘ್ರದಲ್ಲೇ ಅಸಮಾಧಾನವನ್ನೆಲ್ಲಾ ಬಗೆಹರಿಸುತ್ತೇವೆ. ಎಲ್ಲರೂ ಒಗ್ಗೂಡಿ ಚುನಾವಣೆ ಎದುರಿಸುತ್ತೇವೆ ಎಂದ್ರು.