Monday, April 21, 2025
Homeದೇಶಪ್ರಧಾನಿ ಮೋದಿ ಹೀರೋ ಬೊಮ್ಮನಿಗೆ ಕೊಟ್ಟ ಕಾಸೆಷ್ಟು ಗೊತ್ತೇ?

ಪ್ರಧಾನಿ ಮೋದಿ ಹೀರೋ ಬೊಮ್ಮನಿಗೆ ಕೊಟ್ಟ ಕಾಸೆಷ್ಟು ಗೊತ್ತೇ?

ಚಾಮರಾಜನಗರ: ಪ್ರಧಾನಿ ಮೋದಿ ಭಾನುವಾರ ರಾಜ್ಯಕ್ಕೆ ಭೇಟಿ ನೀಡಿ ಬಂಡಿಪುರದಲ್ಲಿ ಸಫಾರಿ ಟ್ರಿಪ್ ಕೂಡ ನಡೆಸಿದ್ದರು. ಈ ವೇಳೆ ಭೇಟಿಯಾಗಿದ್ದ “ದಿ ಎಲಿಫೆಂಟ್ ವಿಸ್ಪರರರ್ಸ್” ಖ್ಯಾತಿಯ ಬೆಳ್ಳಿ-ಬೊಮ್ಮ ಜೋಡಿಗೆ ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಮೊತ್ತವೆಷ್ಟು ಗೊತ್ತೆ? ಈ ಬಗ್ಗೆ ಸ್ವತಃ ಬೊಮ್ಮ ಅವರೇ ಮಾಧ್ಯಮಗಳ ಮುಂದೆ ಬಾಯ್ಬಿಟ್ಟಿದ್ದಾರೆ.
ಪ್ರಧಾನಿ ಮೋದಿ ನಮ್ಮೊಡನೆ ಕುಳಿತು ಪ್ರೀತಿಯಿಂದ ಮಾತನಾಡಿಸಿದರು. ಆದರೆ ಒಂದು ರೂಪಾಯಿ ಕೂಡ ನೀಡಲಿಲ್ಲ. ಯಾವುದೇ ಉಡುಗೊರೆಯನ್ನೂ ಸಹ ಕೊಡಲಿಲ್ಲ ಎಂದಿದ್ದಾರೆ.

ಪ್ರಧಾನಿ ಮೋದಿ, ಬೊಮ್ಮ ಮತ್ತು ಬೆಳ್ಳಿ ದಂಪತಿಗೆ ಹಣದ ಉಡುಗೊರೆ ನೀಡಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂಬ ಮಾತುಗಳು ಕೇಳಿಬಂದಿತ್ತು. ಈ ಬಗ್ಗೆ ಸ್ವತಃ ಸ್ಪಷ್ಟೀಕರಣ ನೀಡಿರುವ ಬೊಮ್ಮ, ಮೋದಿಯವರು ಕೇವಲ ಪ್ರೀತಿಯಿಂದ ಮಾತಾಡಿಸಿದರೇ ಹೊರತೂ ಏನನ್ನೂ ನೀಡಲಿಲ್ಲ ಎಂದಿದ್ದಾರೆ.

ಈ ಬಗ್ಗೆ ಯಾವುದೇ ಬೇಸರವಿಲ್ಲದೆ ಪ್ರತಿಕ್ರಿಯಿಸಿರುವ ಬೊಮ್ಮ, ಪ್ರಧಾನಿ ಮೋದಿ ಬಂದಿದ್ದು ಸಂತೋಷದ ಸಂಗತಿಯಾಗಿದೆ. ಮದುಮಲೈ ಅರಣ್ಯಕ್ಕೆ ಭೇಟಿ ನೀಡಿದ್ದು ಹೆಮ್ಮೆಯ ಸಂಗತಿ. ಸಾಕ್ಷ್ಯಚಿತ್ರದಲ್ಲಿರುವ ಆನೆಗಳಿಗೆ ಮೋದಿಯವರೇ ಸ್ವತಃ ಕೈಯಾರೆ ಕಬ್ಬು ತಿನಿಸಿದ್ದಾರೆ ಎಂದು ನುಡಿದಿದ್ದಾರೆ.
ಇದೇ ವೇಳೆ, ಸಾಕ್ಷ್ಯಚಿತ್ರಕ್ಕೆ ಪ್ರಶಸ್ತಿ ಬಂದಾಗ ತಮಿಳು ನಾಡು ಸಿಎಂ ಚೆನ್ನೈನಲ್ಲಿ ಕಾರ್ಯಕ್ರಮ ಆಯೋಜಿಸಿ ನಮಗೆ ಒಂದು ಲಕ್ಷ ರೂ. ಹಣ ನೀಡಿದ್ದರು. ಜೊತೆಗೆ ಆನೆಗಳ ದೇಖರೇಕಿ ನೋಡಿಕೊಳ್ಳುವ ಕಾವಾಡಿ, ಮಾವುತರಿಗೂ ಹಣ ನೀಡಿದ್ದರು ಎಂದು ಬೊಮ್ಮ ಹೇಳಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!