Wednesday, February 19, 2025
Homeದೇಶನಾನು ಎಪ್ರಿಲ್ ಫೂಲ್ ಜೋಕ್ ಮಾಡಬಹುದೆಂದು ಕಾಂಗ್ರೆಸ್ ಭಾವಿಸಿದೆ: ಮೋದಿ ಹೀಗೆ ಹೇಳಿದ್ದೇಕೆ?

ನಾನು ಎಪ್ರಿಲ್ ಫೂಲ್ ಜೋಕ್ ಮಾಡಬಹುದೆಂದು ಕಾಂಗ್ರೆಸ್ ಭಾವಿಸಿದೆ: ಮೋದಿ ಹೀಗೆ ಹೇಳಿದ್ದೇಕೆ?

ನವದೆಹಲಿ: ಭೋಪಾಲ್– ನವದೆಹಲಿಯನ್ನು ಸಂಪರ್ಕಿಸುವ ಮಧ್ಯಪ್ರದೇಶದ ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದಾರೆ.

ಈ ಸಂದರ್ಭ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಮೋದಿ ಎಪ್ರಿಲ್ ಫೂಲ್ ಜೋಕ್ ಮಾಡಬಹುದು ಎಂದು ಕಾಂಗ್ರೆಸ್ ಹೇಳಬಹುದು. ಆದರೆ ಇವತ್ತು ವಂದೇ ಭಾರತ್ ಗೆ ಚಾಲನೆ ನೀಡುತ್ತೇವೆ ಎಂದು ಹೇಳಿದರು.

ಈ ರೈಲು ದೇಶದ 11ನೆ ವಂದೇ ಭಾರತ್ ಎಕ್ಸ್ ಪ್ರೆಸ್ ಆಗಿದ್ದು, 7.45 ಗಂಟೆಗಳಲ್ಲಿ 708 ಕಿಲೋ ಮೀಟರ್ ಕ್ರಮಿಸುವ ಸಾಮರ್ಥ್ಯ ಹೊಂದಿದೆ.

’’ಹಿಂದಿನ ಸರಕಾರಗಳು ಕೇವಲ ಒಂದೇ ಒಂದು ಕುಟುಂಬ ಭಾರತದ ಮೊದಲ ಕುಟುಂಬ ಎಂದು ಭಾವಿಸಿ, ಮಧ್ಯಮವರ್ಗವನ್ನು ನಿರ್ಲಕ್ಷಿಸಿದ್ದರು. ಭಾರತೀಯ ರೈಲ್ವೆ ಇದಕ್ಕೊಂದು ಉತ್ತಮ ಉದಾಹರಣೆ. ಭಾರತೀಯ ರೈಲು ಜನಸಾಮಾನ್ಯ ಸಂಚರಿಸುವ ವಾಹನ. ಕಳೆದ 9 ವರ್ಷಗಳಲ್ಲಿ ಭಾರತೀಯ ರೈಲ್ವೆ ವಿಶ್ವದಲ್ಲೇ ಅತ್ಯುತ್ತಮ ಸ್ಥಾನ ಪಡೆಯಲು ನಾವು ಪ್ರಯತ್ನಿಸುತ್ತಿದ್ದೇವೆ‘‘ ಎಂದು ಪ್ರಧಾನಿ ಮೋದಿ ಇದೇ ಸಂದರ್ಭ ಹೇಳಿದರು.

ಹೆಚ್ಚಿನ ಸುದ್ದಿ

error: Content is protected !!