ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಬಹುತೇಕ ಸಮಬಲದಲ್ಲಿ ಸೆಣಸಲಿದ್ದರೆ, ಕೇವಲ ನಾಲ್ಕು ಸ್ಥಾನ ಹೊಂದಿರುವ ಜೆಡಿಎಸ್ ಕಿಂಗ್ ಮೇಕರ್ ಆಗಿ ಹೊಮ್ಮಲಿದೆ
55 ಸದಸ್ಯ ಬಲದ ಪಾಲಿಕೆಯಲ್ಲಿ ಒಟ್ಟಾರೆ 35 ಸಂಖ್ಯಾಬಲ ಗಳಿಸಿದವರು ಮೇಯರ್ ಕುರ್ಚಿಯನ್ನು ಅಲಂಕರಿಸಬಹುದು. ಆದರೆ ಮೂರೂ ಪಕ್ಷಗಳ ಬಳಿ ಅಗತ್ಯ ಸಂಖ್ಯಾಬಲವಿಲ್ಲ. ಸದಸ್ಯರು ಹಾಗೂ ಜನಪ್ರತಿನಿಧಿಗಳ ಮತ ಸೇರಿದಂತೆ ಬಿಜೆಪಿ 34 ಸ್ಥಾನ ಹೊಂದಿದ್ದರೆ ಕಾಂಗ್ರೆಸ್ ಬಳಿ 30 ಜನರ ಪಡೆಯಿದೆ. ಹೀಗಾಗಿ ನಾಲ್ಕು ಸದಸ್ಯರ ಸಂಖ್ಯಾಬಲವಿರುವ ಜೆಡಿಎಸ್ ಪಕ್ಷದತ್ತ ಎಲ್ಲರ ಕಣ್ಣು ನೆಟ್ಟಿದೆ. ಜೆಡಿಎಸ್ ಕಾಂಗ್ರೆಸ್‍ಗೆ ಬೆಂಬಲ ಸೂಚಿಸಿದರೆ ಎರಡೂ ಬಣಗಳ ಸಂಖ್ಯೆ 34 ಆಗಲಿದ್ದು ಆಗ ಪರಿಸ್ಥಿತಿ ಮತ್ತಷ್ಟು ಸಂಕೀರ್ಣಗೊಳ್ಳಲಿದೆ.
ಜೆಡಿಎಸ್ ಬೆಂಬಲ ಹೊರತುಪಡಿಸಿ ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳು ಚುನಾವಣಾ ತಂತ್ರಗಾರಿಕೆಯನ್ನು ಪ್ರಯೋಗಿಸುವ ಸಾಧ್ಯತೆಯೂ ಸಹ ದಟ್ಟವಾಗಿದೆ.
ಎಐಃಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರಿನಲ್ಲಿ ನಡೆಯುತ್ತಿರುವ ಈ ಚುನಾವಣೆ ಸಹಜವಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.